ಶಿವಮೊಗ್ಗ: ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಪಶುಸಂಗೋಪನೆ ಮತ್ತು ಕೋಳಿ ಸಾಕಣೆ ಮಹತ್ತರವಾದ ಪಾತ್ರವಹಿಸುತ್ತದೆ ಎಂದು ಜಿ¯್ಲÁ ಪಂಚಾಯಿತಿ ಸಿಇಒ ಸ್ನೇಹಲï ಲೋಖಂಡೆ ತಿಳಿಸಿದರು.
ನವುಲೆ ಕೃಷಿ ವಿe್ಞÁನ ಕೇಂದ್ರದಲ್ಲಿ ಗುರುವಾರ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿe್ಞÁನಗಳ ವಿಶ್ವವಿದ್ಯಾಲಯ, ಐಸಿಎಆರ್-ಕೃಷಿ ವಿe್ಞÁನ ಕೇಂದ್ರ ಹಾಗೂ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಯೋಗದೊಂದಿಗೆ ಪಶುವೈದ್ಯರಿಗೆ ಆಧುನಿಕ ಕೋಳಿ ಸಾಕಣೆ ಕ್ರಮಗಳ ಕುರಿತು ತಾಂತ್ರಿಕ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ವಿಶೇಷವಾಗಿ ಆಧುನಿಕ ಕೋಳಿ ಸಾಕಣೆ ಕ್ರಮಗಳು, ರೋಗ ನಿರ್ವಹಣೆ ಹಾಗೂ ಹೊಸ ತಂತ್ರe್ಞÁನಗಳ ಕುರಿತು ಇಲ್ಲಿ ಚರ್ಚಿಸಿದ ನಂತರ ಹಳ್ಳಿಗಳಲ್ಲಿರುವ ರೈತರಿಗೆ ಇವುಗಳ ಬಗ್ಗೆ ತಿಳಿವಳಿಕೆ ನೀಡಿ ಉತ್ಪಾದನೆ ಹೆಚ್ಚಿಸಿ ರೈತರಿಗೆ ಲಾಭದಾಯಕವಾಗಿಸುವಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿe್ಞÁನಗಳ ವಿವಿ ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ.ಗುರುಮೂರ್ತಿ, ಪಶುಸಂಗೋಪನೆ ಮತ್ತು ಮೌಲ್ಯವರ್ಧನೆ ಕಾರ್ಯಕ್ರಮಗಳು ರೈತರಿಗೆ ತಲುಪಿದಾಗ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಯಶಸ್ವಿಯಾಗಬಹುದು ಎಂದರು.
ಕೃಷಿ ವಿe್ಞÁನ ಕೇಂದ್ರದ ಪಶು ವಿe್ಞÁನಿ ಡಾ. ಎಂ.ಅಶೋಕ್ ಪ್ರಾಸ್ತಾವಿಕ ಮಾತನಾಡಿ, ಕೋಳಿ ಸಾಕಣೆ ಮಹತ್ವ, ಆಹಾರ ಮತ್ತು ಪೋಷಕಾಂಶಗಳ ಭದ್ರತೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.
ಕೆವಿಕೆಯ ಡಾ. ಅಶೋಕ್, ಸುಮುಖ್ ಹ್ಯಾಚರೀಸ್‌ನ ಡಾ. ರವೀಂದ್ರ, ಹಿರಿಯ ಪಶುವೈದ್ಯಾಽಕಾರಿ ಡಾ. ದಯಾನಂದ ಅವರು ವಾಣಿಜ್ಯ ಕೋಳಿ ಸಾಕಣೆ, ಕೋಳಿ ಸಾಕಣೆಯ ನಿರ್ವಹಣಾ ಕ್ರಮಗಳು, ಕೋಳಿ ಮತ್ತು ಹಸು ಸಾಕಣೆಯ ಪೂರ್ವಾಪೇಕ್ಷಿತ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ವಿಚಾರ ಸಂಕಿರಣದಲ್ಲಿ 60 ಪಶು ವೈದ್ಯರು ಭಾಗವಹಿಸಿದ್ದÀರು. ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಶಿವಯೋಗಿ ಯಲಿ, ಶಿವಮೊಗ್ಗ ಪಾಲಿ ಕ್ಲಿನಿಕ್, ಜಿ¯್ಲÁ ಪಶು ಆಸ್ಪತ್ರ ಉಪನಿರ್ದೇಶಕ ಡಾ. ಬಸವೇಶ ಹೂಗಾರ್, ಕೃಷಿ ವಿe್ಞÁನ ಕೇಂದ್ರದ ಹಿರಿಯ ವಿe್ಞÁನಿ ಮತ್ತು ಮುಖ್ಯಸ್ಥ ಡಾ. ಎಚ್.ಜಿ.ಸಣ್ಣತಿಮ್ಮಪ್ಪ, ಕೃಷಿ ವಿe್ಞÁನ ಕೇಂದ್ರದ ವಿe್ಞÁನಿ (ಗೃಹ ವಿe್ಞÁನ) ಡಾ. ಜ್ಯೋತಿ ಎಂ. ರಾಠೋಡ್ ಇದ್ದರು.
ಪೌಷ್ಟಿಕ ಆಹಾರ ದರ 2 ರೂ. ಹೆಚ್ಚಿಸಿ
ಶಿವಮೊಗ್ಗ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಅಂಗನವಾಡಿ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಸರ್ಕಾರದಿಂದ ಉಚಿತವಾಗಿ ನೀಡುತ್ತಿರುವ ಪೌಷ್ಟಿಕ ಆಹಾರದ ದರವನ್ನು ರಾಜ್ಯ ಸರ್ಕಾರ 2 ರೂ. ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಗುರುವಾರ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಾಜ್ಯಾದ್ಯಂತ ಅಂಗನವಾಡಿಯಲ್ಲಿ ಓದುತ್ತಿರುವ 3 ವರ್ಷದಿಂದ 6 ವರ್ಷದೊಳಗಿನ ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರೂ ಸೇರಿದಂತೆ ಒಟ್ಟು 28 -Àಲಾನುಭವಿಗಳಿದ್ದಾರೆ. ರಾಜ್ಯ ಸರ್ಕಾರ ಉಚಿತವಾಗಿ ಪೌಷ್ಟಿಕ ಆಹಾರ ನೀಡುತ್ತಿದೆ. 1 ಮಗುವಿಗೆ 8 ರೂ., ಗರ್ಭಿಣಿ ಬಾಣಂತಿಯರಿಗೆ 21 ರೂ.ಗಳನ್ನು 40:60 ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ನೀಡುತ್ತಿದ್ದು ಸದರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಪೌಷ್ಟಿಕ ಆಹಾರದ ದರದಲ್ಲಿ ಮಗುವಿಗೆ ನೀಡುತ್ತಿರುವ 8 ರೂ. ನಿಂದ 10 ರೂ.ಗೆ ಹೆಚ್ಚಿಸಬೇಕು. ಗರ್ಭಿಣಿ, ಬಾಣಂತಿಯರಿಗೆ ನೀಡುತ್ತಿರುವ 21 ನಿಂದ 23 ರೂ.ಗೆ ಹೆಚ್ಚಿಸಬೇಕೆಂದು ಮನವಿ ಮಾಡಿದ್ದಾರೆ.