ಶಿಕಾರಿಪುರದ ನೂತನ ಪಶುಚಿಕಿತ್ಸಾ ಕಟ್ಟಡಕ್ಕೆ ಶಾಸಕ ಬಿ.ವೈ.ವಿಜಯೇಂದ್ರ ಭೂಮಿ ಪೂಜೆ ನೆರವೇರಿಸಿದರು. ಗುರುಮೂರ್ತಿ, ಭದ್ರಾಪುರ ಹಾಲಪ್ಪ, ರೇಣುಕಸ್ವಾಮಿ, ರುದ್ರಮುನಿ, ಪಾಲಾಕ್ಷಪ್ಪ, ಪ್ರವೀಣ್, ಡಾ.ರವಿಕುಮಾರ್, ಡಾ.ಲಕ್ಷ÷್ಮಣ್ ಇತರರಿದ್ದರು. 
ಜಿಲ್ಲೆ

ರೈತರಿಗೆ ಬಲ ತುಂಬಿದ ಹೈನೋದ್ಯಮ: ಬಿ.ವೈ.ವಿಜಯೇಂದ್ರ

ಶಿಕಾರಿಪುರ: ಕರೊನಾದಂತಹ ಕಷ್ಟದ ಸಮಯದಲ್ಲೂ ಹೈನೋದ್ಯಮ ಲಕ್ಷಾಂತರ ಕುಟುಂಬಗಳ ಕೈಹಿಡಿದಿದೆ. ತಾಲೂಕಿನಲ್ಲಿ ಪ್ರತಿ ದಿನ 90,000ಲೀಟರ್ ಹಾಲನ್ನು ರೈತರು ಕೆಎಂಎಫ್‌ಗೆ ಹಾಕುತ್ತಾರೆ. ಇದು ನಮಗೆ ಹೆಮ್ಮೆಯ ವಿಷಯ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದಲ್ಲಿ ಬುಧವಾರ ಪಶುಪಾಲನಾ ಇಲಾಖೆಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಪ್ರಕೃತಿಯಲ್ಲಿನ ವ್ಯತ್ಯಯ, ಅಕಾಲಿಕ ಮಳೆಯಿಂದ ಕೃಷಿಯಲ್ಲಿ ತೊಂದರೆ ಆದಾಗ, ಬರಗಾಲದಲ್ಲಿ ಹೈನೋದ್ಯಮ ನಮ್ಮ ರೈತರ ಕೈ ಹಿಡಿದಿದೆ. ರೈತರ ಖಾತೆಗೆ ಪ್ರತಿದಿನ 38 ಲಕ್ಷ ರೂ.ಗೂ ಅಽಕ ಹಣ ಸಂದಾಯವಾಗುತ್ತಿದ್ದು ರೈತರಿಗೆ ಆರ್ಥಿಕವಾಗಿ ಹೈನುಗಾರಿಕೆ ಬಲ ತಂದುಕೊಟ್ಟಿದೆ ಎಂದರು.
ಸರ್ಕಾರ ಜಾನುವಾರುಗಳ ಸಂರಕ್ಷಣೆಗೆ ಆದ್ಯತೆ ನೀಡಿ ಆಂಬುಲೆನ್ಸ್ ವ್ಯವಸ್ಥೆ ಮಾಡಿದೆ. 1962ಕ್ಕೆ ಕರೆ ಮಾಡಿದರೆ ಆಂಬುಲೆನ್ಸ್ ಮನೆ ಬಾಗಿಲಿಗೆ ಬಂದು ಜಾನುವಾರುಗಳಿಗೆ ಚಿಕಿತ್ಸೆ ದೊರೆಯುತ್ತದೆ. ತಾಲೂಕಿನಲ್ಲಿ ಹಸು, ಕುರಿ ಸೇರಿ ಒಂದು ಲಕ್ಷಕ್ಕೂ ಹೆಚ್ಚು ಜಾನುವಾರುಗಳಿವೆ. ಎ¯್ಲೆಡೆ ಕಾಲುಬಾಯಿ ರೋಗ ಕಂಡುಬAದಾಗ ಇಲಾಖೆಯ ಮುಂಜಾಗ್ರತೆಯಿAದಾಗಿ ವೈದ್ಯರ ಪರಿಶ್ರಮದಿಂದ ಹೆಚ್ಚು ಹರಡಲಿಲ್ಲ. ಕೊಟ್ಟಿಗೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಸಾಂಕ್ರಾಮಿಕ ರೋಗಗಳು ಹರಡುವಾಗ ರಾಸುಗಳಿಗೆ ತಕ್ಷಣ ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿದರು.
ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಪಶು ಸಂಪತ್ತೇ ನಿಜವಾದ ಸಂಪತ್ತು. ಹಿಂದೆ ರಾಜ ಮಹಾರಾಜರುಗಳ ಸಿರಿವಂತಿಕೆಯನ್ನು ಪಶುಗಳ ಸಂಪತ್ತಿನ ಮೂಲಕವೇ ಅಳೆಯುತ್ತಿದ್ದರು. ನಾವು ಪಶು ಸಂಪತ್ತು ಉಳಿಸಿ ನಾಡನ್ನು ಸಮೃದ್ಧಗೊಳಿಸಬೇಕಾಗಿದೆ ಎಂದರು.
ಎAಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಭದ್ರಾಪುರ ಹಾಲಪ್ಪ, ರೇಣುಕಸ್ವಾಮಿ, ರುದ್ರಮುನಿ, ಪಾಲಾಕ್ಷಪ್ಪ, ಪ್ರವೀಣ್, ಜಿ¯್ಲÁ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶಿವಯೋಗಿ ಬಿ.ಎಲಿ, ತಾಲೂಕು ಆಡಳಿತ ವೈದ್ಯಾಽಕಾರಿ ಡಾ. ರವಿಕುಮಾರ್, ಡಾ. ಲಕ್ಷ÷್ಮಣ್ ಇತರರಿದ್ದರು.

ಶಿಕಾರಿಪುರ ತಾಲೂಕಿನಲ್ಲಿ ಒಟ್ಟು 29 ಪ್ರಾಥಮಿಕ ಪಶು ಚಿಕಿತ್ಸಾ ಘಟಕಗಳಿವೆ. ಇವುಗಳಲ್ಲಿ 25 ಘಟಕಗಳಿಗೆ ಕಟ್ಟಡವಿದ್ದು ಉಳಿದ ನಾಲ್ಕಕ್ಕೆ ತಾಳಗುಂದ ಮತ್ತು ಈಸೂರಿಗೆ ಮಂಜೂರಾಗಿದೆ. ತಾಲೂಕಿನಲ್ಲಿ ಒಟ್ಟು 35 ಜನ ಪಶು ಸಖಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮೂಹಿಕ ಲಸಿಕೆ, ಸಾಂಕ್ರಾಮಿಕ ರೋಗ ಮತ್ತು ಅವುಗಳ ಸಕಾಲಿಕ ಚಿಕಿತ್ಸೆಯ ಅರಿವು ಮೂಡಿಸಲಿz್ದÁರೆ.|ಬಿ.ವೈ.ವಿಜಯೇಂದ್ರಶಾಸಕ