ಬೈಲಹೊಂಗಲ: ಹುಚ್ಚು ನಾಯಿ ಕಡಿತದಿಂದ ಬಸವಿ ಬೀದಿ ಆಕಳು ಮೃತಪಟ್ಟಿದ್ದು, ಪಶು ವೈದ್ಯರ ರ್ನಿಲ್ಯವೇ ಕಾರಣವೆಂದು ಆರೋಪಿಸಿ ರೈತರು ಪಟ್ಟಣದ ಪಶು ಆಸ್ಪತ್ರೆ ಮುಂದೆ ಟ್ರ್ಯಾಕ್ಟರ್ ಟಿಲ್ಲರ್ನಲ್ಲಿ ಮೃತಪಟ್ಟ ಬಸವಿ ಆಕಳು ಕಳೇಬರವಿಟ್ಟು ಈಚೆಗೆ ವಿನೂತನ ಪ್ರತಿಭಟನೆ ನಡೆಸಿದರು.ಮುಖಂಡರಾದ ರಫೀಕ್ ಬಡೇರ, ಅಭಿಷೇಕ ಬೋಳನ್ನವರ ಮಾತನಾಡಿ, ಚಿಕಿತ್ಸೆಗಾಗಿ ಜಾನುವಾರು ತೆಗೆದುಕೊಂಡು ಬಂದರೆ ಪಶು ವೈದ್ಯರು ಹೊರಗಡೆ ಔಷಧ ಬರೆದುಕೊಡುತ್ತಿದ್ದಾರೆ. ಜಾನುವಾರುಗಳ ಚಿಕಿತ್ಸೆಗೆ ರ್ನಿಲ್ಯ ತೋರುತ್ತಿರುವ ವೈದ್ಯರು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಪಶು ವೈದ್ಯರು ಹಾಗೂ ಸಿಬ್ಬಂದಿ ಅಮಾನತುಗೊಳಿಸಬೇಕು. ಸ್ಥಳಕ್ಕೆ ಉಪವಿಭಾಗಾಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದರು. ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಮಾತನಾಡಿ, ಪುರಸಭೆ ಮತ್ತು ಪಶು ವೈದ್ಯಾಧಿಕಾರಿಗಳ ಸಭೆ ಕರೆದು ಇಂತಹ ಟನೆ ಮರಕಳಿಸದಂತೆ ತಿಳುವಳಿಕೆ ನೀಡಲಾಗುವುದು ಎಂದು ಮನವೊಲಿಸಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಮೃತ ಬಸವಿ ಆಕಳನ್ನು ಮೆರವಣಿಗೆ ಮಾಡಿ ಸ್ಥಳಿಯ ಮರಡಿ ಬಸವೇಶ್ವರ ದೇವಸ್ಥಾನದ ಬಳಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮಂಜುನಾಥ ಪೂಜೇರಿ, ರಮೇಶ ತೊಲಗಿ, ಕರವೇ ತಾಲೂಕಾಧ್ಯ ವಿಠ್ಠಲ ಕಡಕೋಳ, ರೈತರಾದ ಅನಿಲ ಬೋಳನ್ನವರ, ಕುಮಾರ ಹೂಗಾರ, ಗಣೇಶ ತುರಮರಿ, ಕಿರಣ ರಾಜಗೋಳಿ, ವಿಠ್ಠಲ ದೊಡ್ಡಮನಿ, ಶಿವಪ್ಪ ಹಳ್ಳೂರ, ಅಜ್ಜಪ್ಪ ಕುಡಸೋಮಣ್ಣವರ, ಅಣ್ಣಪ್ಪ ಗುಮ್ಮತಿ, ನಾಗಪ್ಪ ಲಿಂಬೆನ್ನವರ, ಉಳವಪ್ಪ ಬೆಳಗಾವಿ, ರಾು ಬಡ್ಲಿ, ಬಸವರಾಜ ಹಿಟ್ಟಣಗಿ, ನಾಗು ಬೆಳಗಾವಿ, ಆತ್ಮಾನಂದ ಕುರಬೆಟ್ ಇತರರಿದ್ದರು.