ಮಂಗಳೂರು: ಸ್ಟ್ರೋಕ್ ಆರೈಕೆಯಲ್ಲಿ ಅಸಾಧರಣ ಚಿಕಿತ್ಸೆಯನ್ನು ಒದಗಿಸುವ ಬದ್ದತೆಗಾಗಿ ಮಂಗಳೂರಿನ ಸ್ಟ್ ನ್ಯೂರೋ ಆಡ್ವಾನ್ಸ್ಡ್ ಸ್ಟ್ರೋಕ್ ಸೆಂಟರ್‌ಗೆ ವಿಶ್ವ ಸ್ಟ್ರೋಕ್ ಸಂಸ್ಥೆಯಿಂದ ನೀಡುವ 2024ರ ಪ್ರತಿಷ್ಠಿತ ಏಂಜೆಲ್ಸ್ ಪ್ರಶಸ್ತಿಯನ್ನು ಶನಿವಾರ ಪಡೀಲ್‌ನ ಸ್ಟ್ ನ್ಯೂರೋ ಆಸ್ಪತ್ರೆಯ ಆವರಣದಲ್ಲಿ ಪ್ರದಾನ ಮಾಡಲಾಯಿತು.
ವಿಶ್ವ ಸ್ಟ್ರೋಕ್ ಸಂಸ್ಥೆಯ ಪ್ರತಿನಿಧಿ ಮತ್ತು ಏಂಜೆಲ್ಸ್ ಪ್ರಶಸ್ತಿ ಆಯೋಜಕ ರೋಹನ್ ಗೌರಿ ಅವರು ಸ್ಟ್ ನ್ಯೂರೋ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ರಾಜೇಶ್ ಶೆಟ್ಟಿ ಅವರಿಗೆ ಏಂಜೆಲ್ಸ್ ಪ್ರಶಸ್ತಿ ಪ್ರದಾನಗೈದರು.
ಈ ಸಂದರ್ಭ ಮಾತನಾಡಿದ ರೋಹನ್ ಗೌರಿ, ಸ್ಟ್‌ನ್ಯೊರೋ ಆಸ್ಪತ್ರೆಯ ಟೀಂ ವರ್ಕ್‌ನ ಕಾರಣಕ್ಕೆ ಇಂದು ಉನ್ನತ ಮಟ್ಟದಲ್ಲಿದ್ದು, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದೆ. ಆಸ್ಪತ್ರೆಗಳು ಕೇವಲ ಆಸ್ಪತ್ರೆಗಳಾಗಿರದೆ ತಮ್ಮನ್ನು ನಂಬಿ ಬಂದ ರೋಗಿಗಳಿಗೆ ಅತಿಥ್ಯವನ್ನು ನೀಡಬೇಕಾಗುತ್ತದೆ. ದೇಶ ಹಾಗೂ ವಿದೇಶದ ಹಲವು ಆಸ್ಪತ್ರೆಗಳ ಜತೆ ನಾವು ಕೆಲಸ ಮಾಡಿದ್ದೇವೆ. ಆದರೆ ಸ್ಟ್ ನ್ಯೂರೋ ಆಸ್ಪತ್ರೆಯ ರೀತಿ ನಿಖರವಾದ ಡೇಟಾವನ್ನು ಗಮನಿಸಿಲ್ಲ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸ್ಟ್ರೋಕ್ ಸಂಭವಿಸುತ್ತಿದ್ದು, ಯಾವಾಗಲೂ ಸ್ಟ್ರೋಕ್ ಆದ ಸಂದರ್ಭ ನಿಮ್ಮ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಉತ್ತಮ ಚಿಕಿತ್ಸೆ ನೀಡಲು ಮುಂದಾಗಬೇಕು. ಸ್ಟ್ರೋಕ್‌ನ ಲಕ್ಷಣಗಳನ್ನು ಸರಿಯಾಗಿ ತಿಳಿದುಕೊಳ್ಳಿ ಮತ್ತು ಹೆಚ್ಚು ಸಮಯ ಕಾಯಬೇಡಿ ಆಸ್ಪತ್ರೆಗೆ ದಾಖಲಿಸಿದರೆ ಆರೋಗ್ಯವಂತರಾಗಿ ಮರಳುತ್ತಾರೆ ಎಂದರು.
ಸ್ಟ್ ನ್ಯೂರೋ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ರಾಜೇಶ್ ಶೆಟ್ಟಿ ಮಾತನಾಡಿ, ವಿಶ್ವ ಸ್ಟ್ರೋಕ್ ಸಂಸ್ಥೆಯಿಂದ ಸ್ಟ್ ನ್ಯೂರೋ ಆಸ್ಪತ್ರೆಗೆ ಏಂಜೆಲ್ಸ್ ಆವಾರ್ಡ್ ಪಡೆದಿರುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ. ಸ್ಟ್ ನ್ಯೂರೋ ಆಸ್ಪತ್ರೆಯ ಇಡೀ ತಂಡದ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಆಸ್ಪತ್ರೆಯು ನವೀನ ತಂತ್ರಜ್ಞಾನ, ಸುಸಜ್ಜಿತ ಸೌಲಭ್ಯಗಳು ಮತ್ತು ಅತ್ಯಾಧುನಿಕ ಚಿಕಿತ್ಸೆಗೆ ಪ್ರಸಿದ್ದಿಯಾಗಿದೆ. ಈ ಕೇಂದ್ರವು ತೀವ್ರ ಸ್ಟ್ರೋಕ್ ಕೇರ್‌ನಲ್ಲಿ ಪರಿಣತಿಯನ್ನು ಹೊಂದಿದ್ದು, ರೋಗಿಗಳಿಗೆ ತ್ವರಿತ, ಸಂಪೂರ್ಣ ಮತ್ತು ಪ್ರಾಮಾಣಿಕ ಚಿಕಿತ್ಸೆ ನೀಡಲು ಬದ್ಧವಾಗಿದೆ ಎಂದರು.
ಸೀನಿಯರ್ ನ್ಯೂರೋಲಾಜಿಸ್ಟ್ ಡಾ.ರಕ್ಷಿತ್ ಕೆದಂಬಾಡಿ ಉಪಸ್ಥಿತರಿದ್ದರು.
ಸ್ಟ್‌ನ್ಯೂರೋ ಆಸ್ಪತ್ರೆಯ ಕನ್ಸಲೆಂಟ್ ನ್ಯೂರೋಲಜಿಸ್ಟ್ ಗಳಾದ ಡಾ. ರಾಘವೇಂದ್ರ ಸ್ವಾಗತಿಸಿ, ಪ್ರಸ್ತಾವನೆಗೈದರು. ಬ್ರಿಯಾನ ತಾವ್ರೋ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸ್ಟ್ ನ್ಯೂರೋಗೆ ಜಾಗತಿಕ ಮಾನ್ಯತೆ
ಸ್ಟ್ರೋಕ್ ಕೇರ್‌ನಲ್ಲಿ ಗೋಲ್ಡ್ ಸ್ಟಾಂಡರ್ಡ್ ಅನ್ನು ಗುರುತಿಸುವ ಏಂಜೆಲ್ ಪ್ರಶಸ್ತಿಯು ಆಸ್ಪತ್ರೆಯಲ್ಲಿ ಸ್ಟ್ರೋಕ್ ಕಾಯಿಲೆಗೆ ನೀಡುವ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಆರೈಕೆಗಾಗಿ ನೀಡಲಾಗುತ್ತಿದೆ. ಜಾಗತಿಕವಾಗಿ ಏಂಜೆಲ್ಸ್ ಪ್ರಶಸ್ತಿಯು ಸ್ಟ್ರೋಕ್ ಆರೈಕೆಗೆ ನೀಡುವ ಅತ್ಯುನ್ನತ ಗೌರವವಾಗಿದ್ದು, ಈ ಗೌರವವು ಸ್ಟ್ ನ್ಯೂರೋದಲ್ಲಿ ಸ್ಟ್ರೋಕ್ ರೋಗಿಗಳಿಗೆ ನೀಡುವ ಚಿಕಿತ್ಸೆಯು ವೈದ್ಯಕೀಯ ಮಾನದಂಡಗಳಿಗನುಗುಣವಾಗಿ ಬಹಳ ಉತ್ತಮ ಸೇವೆಯನ್ನು ನೀಡುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈ ಪ್ರಶಸ್ತಿಯನ್ನು ಸ್ವೀಕರಿಸುವ ಮೂಲಕ ಸ್ಟ್ ನ್ಯೂರೋ ಸ್ಟ್ರೋಕ್ ಆರೈಕೆಯಲ್ಲಿ ಸ್ಥಳೀಯವಾಗಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿಯೂ ಗುರುತಿಸಿಕೊಂಡಿದೆ.