ಜಿಲ್ಲೆ

ಎಲ್ಲರಿಗೂ ಶಿಕ್ಷಣ, ಆರೋಗ್ಯ, ವಸತಿ ಸಿಗಲಿ: ಎಸ್‌ಎಫ್‌ಐ ರಾಷ್ಟ್ರೀಯ ಅಧ್ಯಕ್ಷ ವಿ.ಪಿ.ಸಾನು ಆಶಯ

ಗಂಗಾವತಿ: ಸ್ವಾತಂತ್ರೃ ದೊರೆತು 75 ವರ್ಷವಾದರೂ ಸಾಮಾನ್ಯ ಜನರಿಗೆ ನೀರು, ಸೂರು ಮತ್ತು ಶಿಕ್ಷಣ ಸೇರಿ ಮೂಲ ಸೌಕರ್ಯ ಸಿಕ್ಕಿಲ್ಲ ಎಂದು ಎಸ್‌ಎ್ಐ ರಾಷ್ಟ್ರೀಯ ಅಧ್ಯಕ್ಷ ವಿ.ಪಿ.ಸಾನು ಹೇಳಿದರು.
ನಗರದ ಬಾಬು ಜಗಜೀವನರಾಂ ವೃತ್ತದಲ್ಲಿ ಬುಧವಾರ ಸಂವಿಧಾನ, ಶಿಕ್ಷಣ ಮತ್ತು ಭಾರತ ಉಳಿವಿಗಾಗಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಕೋಮುವಾದ ಮತ್ತು ಖಾಸಗೀಕರಣ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಎಲ್ಲರಿಗೂ ಶಿಕ್ಷಣ, ಆರೋಗ್ಯ, ವಸತಿ ದೊರೆಯಬೇಕಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಜಾಥಾದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ರಾಜ್ಯ ಅಧ್ಯಕ್ಷ ಅಮರೇಶ ಕಡಗದ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ 371 ಜೆ ವಿಧೇಯಕ ಸಮರ್ಪಕ ಜಾರಿಯಾಗಿಲ್ಲ. ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಎಸ್‌ಎ್ಐ ಪರಿಣಾಮಕಾರಿ ಹೋರಾಟ ಹಮ್ಮಿಕೊಂಡಿದೆ ಎಂದರು. ಕೇಂದ್ರ ಸಮಿತಿ ಸದಸ್ಯ ನಿತೀಶ್ ನಾರಾಯಣ, ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ, ತಾಲೂಕು ಅಧ್ಯಕ್ಷ ಗ್ಯಾನೇಶ ಕಡಗದ್, ಪದಾಧಿಕಾರಿಗಳಾದ ಶಿವಕುಮಾರ ಈಚನಾಳ್, ರಮೇಶ ವೀರಾಪುರ, ಭೀಮನಗೌಡ, ಮಂಜುನಾಥ ಡಗ್ಗಿ, ಮರಿನಾಗಪ್ಪ, ಸೋಮನಾಥ, ಬಾಳಪ್ಪ ಹುಲಿಹೈದರ್, ಹುಸೇನಪ್ಪ, ವೀರೇಶ ಇತರರಿದ್ದರು.