ಸೋಮವಾರಪೇಟೆ ಬಸವೇಶ್ವರ ದೇವಾಲಯದಲ್ಲಿ ಅಂಗಾರಕ ಸಂಕಷ್ಟಿ ಅಂಗವಾಗಿ ಬಲಮುರಿ ಗಣಪತಿಗೆ ಶ್ರೀಗಂಧದಿಂದ ಅಲಂಕರಿಸಲಾಗಿತ್ತು.  
ಜಿಲ್ಲೆ

ಅಂಗಾರಕ ಸಂಕಷ್ಟಿ ವಿಶೇಷ ಪೂಜೆ

ಮಾದೇಶ್ ತಿ.ನರಸೀಪುರ

ಸೋಮವಾರಪೇಟೆ: ಪಟ್ಟಣದ ದೇವಾಲಯಗಳಲ್ಲಿ ಇತ್ತೀಚೆಗೆ ಅಂಗಾರಕ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.

ವಿದ್ಯಾಗಣಪತಿ ದೇವಾಲಯದಲ್ಲಿ ನವಿಲುಗರಿಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಅರ್ಚಕ ಚಂದ್ರಶೇಖರ ಶಾಸ್ತ್ರಿ ನೇತೃತ್ವದಲ್ಲಿ ರಾಕೇಶ್ ಶಾಸ್ತ್ರಿ, ರಾಜಣ್ಣ ಅವರು ದೇವರಿಗೆ ಅರ್ಚನೆ, ಅಷ್ಟೋತ್ತರ ನಂತರ ಮಹಾಮಂಗಳಾರತಿ ಬೆಳಗಿಸಿದರು.

ಬಸವೇಶ್ವರ ದೇವಾಲಯದಲ್ಲಿ ಗಣಪತಿ ಮೂರ್ತಿಯನ್ನು ಶ್ರೀಗಂಧದಿಂದ ಅಲಂಕರಿಸಿ ಅರ್ಚಕ ಶೇಖಯ್ಯ ಶಾಸ್ತ್ರಿ ವಿಶೇಷ ಪೂಜೆ, ಮಂಗಳಾರತಿ ನೆರವೇರಿಸಿದರು.

ಸೋಮೇಶ್ವರ ದೇವಾಲಯದಲ್ಲಿ ಅರ್ಚಕ ಚಿತ್ರಕುಮಾರ ಭಟ್ ಹಾಗೂ ರವಿಶಂಕರ್ ಅವರು ದೇವರಿಗೆ ವಿಶೇಷ ಪೂಜೆಯೊಂದಿಗೆ ಮಹಾಮಂಗಳಾರತಿ ನೆರವೇರಿಸಿದರು.