ಜಿಲ್ಲೆ

ಇಡಗುಂಜಿಯಲ್ಲಿ ಅಂಗಾರಕ ಸಂಕಷ್ಟಿ

ಉತ್ತರ ಕನ್ನಡ ಡೆಸ್ಕ್

ಹೊನ್ನಾವರ: ತಾಲೂಕಿನ ಇಡಗುಂಜಿಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟಿ ನಿಮಿತ್ತ ಮಂಗಳವಾರ ವಿಶೇಷ ಪೂಜೆ ನಡೆಯಿತು. ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವಿವಿಧ ಸೇವೆ ಸಲ್ಲಿಸಿದರು. ಅಂಗಾರಕ ಸಂಕಷ್ಟಿ ಪ್ರಯುಕ್ತ ಹೆಚ್ಚು ಜನರು ಆಗಮಿಸಿದ್ದರಿಂದ ಬೆಳಗ್ಗೆಯಿಂದಲೇ ಸರತಿ ಸಾಲಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರು ದೇವರಿಗೆ ಅಭಿಷೇಕ, ದೂರ್ವಾರ್ಚನೆ, ಹಣ್ಣು-ಕಾಯಿ ಹಾಗೂ ಇಂಡಗುಂಜಿಯ ವಿಶೇಷವಾದ ಪಂಚಕಜ್ಜಾಯ ಸೇವೆ ಸಲ್ಲಿಸಿದರು.