ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾದ 4ನೇ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮವನ್ನು ಗ್ರಾಪಂ ಉಪಾಧ್ಯಕ್ಷ ಮಂಜುನಾಥಶಾಸ್ತ್ರೀ ಹಿರೇಮಠ ಉದ್ಘಾಟಿಸಿದರು. ಅಂಗನವಾಡಿ ಮೇಲ್ವಿಚಾರಕಿ ಲಲಿತಾ ನಾಯ್ಕ, ಕಾರ್ಯಕರ್ತೆಯರಾದ ಶ್ರೀದೇವಿ ಬಡಿಗೇರ, ಭಾರತಿ ಓಜನಹಳ್ಳಿ, ಲಕ್ಷ್ಮೀ ಚಿಣಗಿ ಇನ್ನಿತರರಿದ್ದರು. 
ಜಿಲ್ಲೆ

ಅಂಗನವಾಡಿಯಿಂದ ಮಕ್ಕಳಿಗೆ ಪ್ರಯೋಜನ

ಯಲಬುರ್ಗಾ: ಅಂಗನವಾಡಿಯಿಂದ ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದ ಕಲಿಕೆಗೆ ಉತ್ತೇಜನ ನೀಡಲು ಸಹಾಯವಾಗಿದೆ ಎಂದು ಗ್ರಾಪಂ ಉಪಾಧ್ಯಕ್ಷ ಮಂಜುನಾಥಶಾಸ್ತ್ರೀ ಹಿರೇಮಠ ಹೇಳಿದರು.

ಪಾಲಕರಿಗೆ ಶಾಲಾಪೂರ್ವ ಶಿಕ್ಷಣ ಚಟುವಟಿಕೆ

ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ 4ನೇ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಪಾಲಕರಿಗೆ ಶಾಲಾಪೂರ್ವ ಶಿಕ್ಷಣ ಚಟುವಟಿಕೆಗಳಾದ ಮುಕ್ತ ಆಟ, ಪ್ರಾರ್ಥನೆ, ಹಾಜರಾತಿ, ಅಭಿನಯ, ಗೀತೆಗಳನ್ನು ಹಾಡಿಸಲಾಯಿತು.
ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಗೀತಾ ಈಳಿಗೇರ್, ಅಂಗನವಾಡಿ ಮೇಲ್ವಿಚಾರಕಿ ಲಲಿತಾ ನಾಯ್ಕ, ಕಾರ್ಯಕರ್ತೆಯರಾದ ಶ್ರೀದೇವಿ ಬಡಿಗೇರ, ಭಾರತಿ ಓಜನಹಳ್ಳಿ, ಲಕ್ಷ್ಮೀ ಚಿಣಗಿ, ಅನ್ನಪೂರ್ಣ ಹಿರೇಮಠ