ಜಿಲ್ಲೆ

Anganavadi ನೇಮಕಾತಿ ಅಧಿಸೂಚನೆ 9 ಜಿಲ್ಲೆಗಳಲ್ಲಿ ರದ್ದು

Uttara Kannada - Subash Hegde

ಕಾರವಾರ: Anganavadi  ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಯನ್ನು ಆನ್‌ಲೈನ್ ಮೂಲಕ ನೇಮಕಾತಿ ಮಾಡುವ ಮೊದಲ ಪ್ರಯತ್ನದಲ್ಲಿ ಗೊಂದಲ ಉಂಟಾಗಿದೆ.

ಇದರಿಂದ ಈಗಾಗಲೇ ನೇಮಕಾತಿ ಸಂಬಂಧ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಲಾಗಿದೆ. ಉತ್ತರ ಕನ್ನಡ, ಧಾರವಾಡ ಸೇರಿ ರಾಜ್ಯದ 9 ಜಿಲ್ಲೆಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನೇಮಕಾತಿಗೆ ಆನ್‌ಲೈನ್ ವ್ಯವಸ್ಥೆಯನ್ನು ಮೊದಲ ಬಾರಿಗೆ ಜಾರಿಗೆ ತರಲಾಗಿತ್ತು. ಜೂನ್ ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಆನ್‌ಲೈನ್ ಮೂಲಕವೇ ಅರ್ಜಿ ಆಹ್ವಾನಿಸಿ, ತಾಲೂಕು ಹಂತದಲ್ಲಿ ಆನ್‌ಲೈನ್‌ನಲ್ಲೇ ಪರಿಶೀಲನೆ ನಡೆಸಿ, ಜಿಲ್ಲಾ ಮಟ್ಟದಲ್ಲಿ ಅಂತಿಮ ಪಟ್ಟಿಯನ್ನು ಸಿದ್ಧ ಮಾಡಲು ಸೂಚನೆ ನೀಡಲಾಗಿತ್ತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಲಿ ಇರುವ 81 ಕಾರ್ಯಕರ್ತೆಯರು ಹಾಗೂ 263 ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಪಿಯುಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರುವ ಈ ಹುದ್ದೆಗೆ 3 ಸಾವಿರ  ಹಾಗೂ ಸಹಾಯಕಿಯರ ಹುದ್ದೆಗೆ 2498 ಅರ್ಜಿಗಳು ಸ್ವೀಕೃತವಾಗಿದ್ದವು.

ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಕಚೇರಿಯು ಎಲ್ಲ 9 ಜಿಲ್ಲೆಗಳ ಅಧಿಸೂಚನೆಯನ್ನು ರದ್ದು ಮಾಡುವಂತೆ ಸೂಚಿಸಿದೆ.

ಇದರಿಂದ ಡಿಸೆಂಬರ್ 23 ರಂದು ನಡೆದ ಜಿಲ್ಲಾಽಕಾರಿ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡು ನೇಮಕಾತಿ ಅಧಿಸೂಚನೆಯನ್ನು ರದ್ದು ಮಾಡಿರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವಿರೂಪಾಕ್ಷ ಗೌಡ ಪಾಟೀಲ್ ತಿಳಿಸಿದ್ದಾರೆ.

 Anganavadi ಏನು ಸಮಸ್ಯೆ..?

ಅಂಗನವಾಡಿಕಗಳಿಗೆ ಆಯ್ಕೆಯ ಸಮಯದಲ್ಲಿ ಸ್ಥಳೀಯರಿಗೆ ಹಾಗೂ ವಿಧವೆಯರಿಗೆ ಆದ್ಯತೆ ನೀಡಬೇಕು ಎಂಬ ನಿಯಮವಿದೆ.

ಆದರೆ, ಆನ್‌ಲೈನ್ ವ್ಯವಸ್ಥೆಯಲ್ಲಿ ಅದನ್ನು ಜೋಡಿಸಿರಲಿಲ್ಲ. ಇದರಿಂದ ಹೊಸ ಪದ್ಧತಿಯಿಂದ ವಿಧವೆಯರಿಗೆ ಅನ್ಯಾಯ ಆಗುವ ಸಂಭವ ಇತ್ತು.

ಮುಂದೆ ಪ್ರಕರಣ ನ್ಯಾಯಾಲಯಕ್ಕೆ ಹೋಗಿ ತೊಂದರೆ ಉಂಟಾಗುವುದನ್ನು ತಪ್ಪಿಸಲು ಈಗಲೇ ಅಽಸೂಚನೆಯನ್ನು ರದ್ದುಗೊಳಿಸಲಾಗಿದೆ.

ಆನ್‌ಲೈನ್ ಪೋರ್ಟಲ್

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಪಿಯುಸಿ ಅಂಕಗಳು, ಹಾಗೂ ವಿವಿಧ ಮೀಸಲಾತಿಗಳನ್ನು ಪರಿಗಣಿಸಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಆಯ್ಕೆಯ ಬಗ್ಗೆ ಸಾಕಷ್ಟು ಆಕ್ಷೇಪಗಳು ಕೇಳಿ ಬರಲಾರಂಭಿಸಿದ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ಪಾರದರ್ಶಕವಾಗಿ ನೇಮಕಾತಿ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿತ್ತು. ಜಿಲ್ಲೆಯಲ್ಲಿ ಕಾರ್ಯಕರ್ತೆಯರ ಹುದ್ದೆಗೆ ಸಲ್ಲಿಕೆಯಾದ ಅರ್ಜಿಗಳಲ್ಲಿ 1399 ಅರ್ಜಿಗಳು ಅಪೂರ್ಣವಾಗಿದ್ದು, ಸಹಾಯಕಿಯರ ಹುದ್ದೆಗೆ ಸಲ್ಲಿಕೆಯಾದ 836 ಅರ್ಜಿಗಳು ಅಪೂರ್ಣಗೊಂಡಿದ್ದವು. ಮುಂದೆ ಆಗಬಹುದಾದ ಸಮಸ್ಯೆಯನ್ನು ಚರ್ಚಿಸಿ ಅಽಸೂಚನೆಯನ್ನು ರದ್ದುಪಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಸಿಡಿಪಿಒಗಳಿಗೆ ಪತ್ರ ಬರೆದಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ

ವಿರೂಪಾಕ್ಷ ಗೌಡ ಪಾಟೀಲ್

ಕೇಂದ್ರ ಕಚೇರಿಯ ಸೂಚನೆಯಂತೆ ಉತ್ತರ ಕನ್ನಡ ಸೇರಿ 9 ಜಿಲ್ಲೆಗಳಲ್ಲಿ Anganavadi ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ಆನ್‌ಲೈನ್ ನೇಮಕಾತಿ ಅಧಿಸೂಚನೆಯನ್ನು ರದ್ದು ಮಾಡಲಾಗಿದೆ. ಜಿಲ್ಲೆಯಲ್ಲಿ 35 ವಿಧವೆಯರು ಅರ್ಜಿ ಹಾಕಿದ್ದರು. ಆದರೆ, ಆನ್‌ಲೈನ್ ಪದ್ಧತಿಯಲ್ಲಿ ಅವರಿಗೆ ಅವಕಾಶ ತಪ್ಪುವ ಸಾಧ್ಯತೆ ಇದ್ದುದರಿಂದ ನೇಮಕಾತಿಯನ್ನು ರದ್ದು ಮಾಡಲಾಗಿದೆ. ಪೋರ್ಟಲ್‌ನಲ್ಲಿ ವ್ಯವಸ್ಥೆ ಬದಲಾದ ನಂತರ ಮುಂದೆ ಮತ್ತೆ ಅರ್ಜಿ ಆಹ್ವಾನಿಸಲಾಗುವುದು.