accused 
ಜಿಲ್ಲೆ

ಚಾಕುವಿನಿಂದ ಇರಿದು ತಂದೆಯ ಕೊಲೆ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಆನೇಕಲ್
ಮದ್ಯಕ್ಕೆ ದಾಸನಾಗಿದ್ದ ಮಗ ತಂದೆಗೂ ಮದ್ಯ ಸೇವಿಸುವಂತೆ ಪೀಡಿಸುತ್ತಿದ್ದ, ಇದಕ್ಕೆ ಒಪ್ಪದ ತಂದೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಇಂಥಹದ್ದಕೊಂದು ವಿಲಕ್ಷಣ ಪ್ರಕರಣ ಬನ್ನೇರುಘಟ್ಟದಲ್ಲಿ ನಡೆದಿದ್ದು, ವೇಲಾಯುಧನ್ (75) ಎಂಬುವರು ಹತ್ಯೆಯಾಗಿದ್ದು, ಕೊಲೆ ಆರೋಪಿ ವಿನೋದ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ? ಕೇರಳದ ಏರಿಮಲೈ ಮೂಲದ ವೇಲಾಯುಧನ್ ಕುಟುಂಬ ಬನ್ನೇರುಘಟ್ಟದಲ್ಲಿ ವಾಸವಿತ್ತು, ಮದ್ಯದ ಚಟಕ್ಕೆ ದಾಸನಾಗಿದ್ದ ವಿನೋದ್ ಕೆಲಸಕ್ಕೂ ಹೋಗದೆ ತಂದೆಯ ಪಿಂಚಣಿ ಹಣವನ್ನು ಕಿತ್ತುಕೊಳ್ಳುತ್ತಿದ್ದ ಎನ್ನಲಾಗಿದೆ. ಶನಿವಾರ ರಾತ್ರಿ ಮನೆಗೆ ಮದ್ಯ ತರಿಸಿದ್ದ ಆರೋಪಿ ತಂದೆಗೆ ಮದ್ಯ ಸೇವಿಸುವಂತೆ ಬಲವಂತ ಮಾಡಿದ್ದ, ಇದಕ್ಕೆ ಒಪ್ಪದಿದ್ದಾಗ ಬಲವಂತವಾಗಿ ಮದ್ಯ ಕುಡಿಸಿದ್ದ ಬಳಿಕ ವಿನಾಕಾರಣ ಗಲಾಟೆ ಶುರುಮಾಡಿ ಚಾಕುವಿನಿಂದ ತಂದೆ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ತಾಯಿ ಕ್ಯಾನ್ಸರ್ ರೋಗಿಯಾಗಿದ್ದು ತಂದೆಯ ಪಿಂಚಣಿ ಹಣದಿಂದ ಸಂಸಾರ ಸಾಗುತ್ತಿತ್ತು. ತಂದೆ ಮೃತಪಟ್ಟಿದ್ದು, ಮಗ ಜೈಲು ಸೇರಿದ್ದಾನೆ. ಬನ್ನೇರುಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.