anekal dental health camp 
ಜಿಲ್ಲೆ

ದಂತ ರಕ್ಷಣೆ ಎಲ್ಲರ ಜವಾಬ್ದಾರಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಆನೇಕಲ್
ಚಿಕ್ಕ ವಯಸ್ಸಿನಲ್ಲಿ ಹಲ್ಲು ಬಿದ್ದು ಮತ್ತೆ ಹುಟ್ಟುವ ಹಲ್ಲು ಮನುಷ್ಯನಿಗೆ ಶಾಶ್ವತವಾದ ಆಸ್ತಿ. ಅದನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು ಎಂದು ಡಾ.ಶಶಿಕಿರಣ್ ಹೇಳಿದರು.
ಪಟ್ಟಣದ ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ರಾಜಲಾಂಛನ ಸಂಸ್ಥೆ ಹಾಗೂ ಅಂಬಿಕಾ ಡೆಂಟಲ್ ಕೇರ್ ವತಿಯಿಂದ ಹಮ್ಮಿಕೊಂಡಿದ್ದ ದಂತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಏಳು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಹಲ್ಲುಗಳ ಬಗ್ಗೆ ವಿಶೇಷ ಗಮನ ಹರಿಸಬೇಕು, ನೈಸರ್ಗಿಕವಾಗಿ ಬರುವ ಹಲ್ಲುಗಳೆ ಶಾಶ್ವತ. ಕೃತಕವಾಗಿ ನಿರ್ಮಿಸುವ ಹಲ್ಲುಗಳಿಗೆ ಅಷ್ಟು ಬಲ ಇರುವುದಿಲ್ಲ ಎಂದರು.
ಹಲ್ಲಿನ ತೊಂದರೆ ಇರುವ 210 ಮಂದಿ ತಪಾಸಣೆಗೆ ಒಳಪಟ್ಟರು.
ರಾಜಲಾಂಛನ ಕೇಂದ್ರ ಘಟಕದ ಅಧ್ಯಕ್ಷ ನರಸಿಂಹ ಮೂರ್ತಿ, ಜಿಗಣಿ ಘಟಕದ ಅಧ್ಯಕ್ಷ ತೆಲಗರಹಳ್ಳಿ ಗಣೇಶ್, ಆನೇಕಲ್ ಘಟಕದ ಅಧ್ಯಕ್ಷ ಸೋಮಶೇಖರ್, ಅಂಬಿಕಾ ಡೆಂಟಲ್ ಕೇರ್ ಮಾಲೀಕರಾದ ಡಾ.ನಿತಿನ್, ಡಾ.ವಿದ್ಯಾ, ಡಾ.ಸುಭಾಷಿಣಿ, ರಾಜಲಾಂಛನ ಸಂಸ್ಥೆಯ ಸದಸ್ಯರಾದ ರುದ್ರೇಶ್, ತಿರುಪಾಳ್ಯ ಮಂಜು, ವಸಂತ್, ಕಲೀಂ, ಕಾರ್ಪೆಂಟ್ ಮಂಜು, ರೇಣುಕಮ್ಮ, ಮಂಜುನಾಥ್ ಇದ್ದರು.