ಮಂಗಳೂರು: ದಕ್ಷಿಣ ಕನ್ನಡ ಅಂಧರ ಸೇವಾ ಸಂಘದ ಸಾಮಾಜಿಕ ಸೇವೆ ಶ್ಲಾಘನೀಯ ಎಂದು ಸೈಂಟ್ ಅಲೋಶಿಯಸ್ ಕಾಲೇಜ್ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರವೀಣ್ ಮಾರ್ಟಿನ್ ಹೇಳಿದರು.
ಅಂಧರ ಸೇವಾ ಸಂದ ವತಿಯಿಂದ 259ನೇ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಜಿಲ್ಲಾ ಕಾರಾಗೃಹದಲ್ಲಿ ಉದ್ಘಾಟಿಸಿ, ಅವರು ಮಾತನಾಡಿದರು.
ಜಿಲ್ಲಾ ಕಾರಾಗೃಹದ ನಿವಾಸಿಗಳಿಗೆ ಪರಿವರ್ತನೆ ಜೀವನದ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಗಳಾಗಲು ಕರೆ ನೀಡಿದರು.
ಅಂಧರ ಸೇವಾ ಸಂಘದ ಕಾರ್ಯದರ್ಶಿ ಪಿ. ರವೀಂದ್ರರಾವ್ ಮಾತನಾಡಿ ಸುಮಾರು 43 ವರ್ಷಗಳಿಂದ ನಿರಂತರವಾಗಿ ಗ್ರಾಮೀಣ ಪ್ರದೇಶದಲ್ಲಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ನಮ್ಮ ಸಂಘವು ಮಾಡುತ್ತಿರುವ ಉಚಿತ ಸೇವೆ ಹಾಗೂ ಕನ್ನಡಕ ವಿತರಣೆ, ಔಷಧ ವಿತರಣೆ ಹಾಗೂ ಕ್ಯಾಟರಾಕ್ಟ್ ಶಸ್ತ್ರ ಚಿಕಿತ್ಸೆಯಿಂದ ಸಾವಿರಾರು ಮಂದಿಗೆ ಜೀವನದಲ್ಲಿ ಬೆಳಕನ್ನು ಕೊಡುತ್ತಿದೆ ಎಂದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕ ಬಿ.ಟಿ.ಹೊಬೆಸಲಪ್ಪ ಹಾಗೂ ಸೈಂಟ್ ಅಲೋಶಿಯಸ್ ವಿವಿ ರಿಜಿಸ್ಟ್ರಾರ್ ಡಾ. ಅಲ್ವಿನ್ ಡಿಸೋಜ ಶುಭ ಹಾರೈಸಿದರು.
ಕಾರಾಗೃಹದ ಕೌನ್ಸಿಲರ್ ಡೆನಿಸ್, ಜೈಲರ್ ರಾಜೇಂದ್ರ ಕೆ., ಅಂಧರ ಸೇವಾ ಸಂಘದ ಪದಾಧಿಕಾರಿಗಳಾದ ವೈ.ಆರ್.ಭಟ್, ಶೋಭಾರಾವ್, ಪಿ. ಸುರೇಂದ್ರ ರಾವ್, ಸ್ವರ್ಣ ಆರ್.ಭಟ್, ಸುರೇಶ್ ವರ್ತಾಡಿ, ಮಂಗಳ ಭಟ್, ಮಂಗಳೂರು
ಶಾಂತರಾಮ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಲವ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. 100 ಮಂದಿ ಫಲಾನುಭವಿಗಳ ಪೈಕಿ 70ರಷ್ಟು ಉಚಿತ ಕನ್ನಡಕ, 20
ಮಂದಿಗೆ ಔಷಧ ಹಾ ೂ 5 ಮಂದಿಗೆ ಶಸ್ತ್ರ ಚಿಕಿತ್ಸೆಗೆ ಗುರುತಿಸಲಾಯಿತು. ಡಾ. ಜಯರಾಮ್ ಶೆಟ್ಟಿ ಮತು ್ತ
ಡಾ. ರಿಶಿಕೇಶ್ ಅಮೀನ್ ಸಹಕರಿಸಿದರು.