ಜಿಲ್ಲೆ

60 ಲಕ್ಷ ರೂ.ಪಡೆದು ವಂಚಿಸಿದಾತ ಬಂಧನ

ಕಾಸರಗೋಡು: ಜರ್ಮನಿ ಸೇರಿದಂತೆ ಐರೋಪ್ಯ ದೇಶಗಳಲ್ಲಿ ಭಾರಿ ವೇತನದ ಉದ್ಯೋಗಕ್ಕೆ ತೆರಳಲು ವೀಸಾ ನೀಡುವ ಭರವಸೆಯೊಂದಿಗೆ ಲಕ್ಷಾಂತರ ರೂ.ಮೊತ್ತ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ತ್ರಿಶೂರ್ ಅಷ್ಟಮಿಚ್ಚಿರ ನಿವಾಸಿ ಪಿ.ಬಿ.ಗೌತಮ್‌ಕೃಷ್ಣ ಎಂಬಾತನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕೇರಳಾದ್ಯಂತ 30ಕ್ಕೂ ಹೆಚ್ಚು ಮಂದಿಯಿಂದ 60 ಲಕ್ಷ ರೂ.ಪಡೆದು ವಂಚಿಸಲಾಗಿದೆ. ಹಣ ನೀಡಿ ಹಲವು ಸಮಯ ಕಳೆದರೂ, ವೀಸಾ ಆಗಲಿ, ನೀಡಿದ ಹಣವನ್ನಾಗಲಿ ವಾಪಸು ವಾಡದಿರುವ ಬಗ್ಗೆ ದೂರು ನೀಡಲಾಗಿತ್ತು. ಪೊಲೀಸರು ವಿಚಾರಣೆ ನಡೆಸಿದಾಗ, ಆರೋಪಿ ಬೆಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ವಾಹಿತಿ ಲಭಿಸಿತ್ತು. ಡಿವೈಎಸ್‌ಪಿ ಸಿ.ಕೆ.ಸುನೀಲ್ ಕುವಾರ್, ಹೊಸದುರ್ಗ ಠಾಣೆ ಇನ್‌ಸ್ಪೆಕ್ಟರ್ ಪಿ.ಅಜಿತ್‌ಕುವಾರ್, ಎಎಸ್‌ಐ ಆನಂದಕಷ್ಣ ನೇತತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಈತನ ವಿರುದ್ಧ ಹೊಸದುರ್ಗ ಠಾಣೆಯೊಂದರಲ್ಲೇ 28 ಪ್ರಕರಣ ದಾಖಲಾಗಿದೆ. ವಂಚನಾ ಜಾಲದಲ್ಲಿ ಮಡಿಕೇರಿ ನಿವಾಸಿಯೋರ್ವನೂ ಶಾಮೀಲಾಗಿರುವ ವಾಹಿತಿಯಿದೆ. ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.