ಗಂಗಾವತಿ ಕಸಾಪಭವನ ಆವರಣದಲ್ಲಿ ಕಸಾಪದಿಂದ ಸಾಹಿತಿ ಮತ್ತು ಸಂಘಟಕ ಹನುಮಂತಪ್ಪ ಅಂಡಗಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಅಜ್ಮೀರ್ ನಂದಾಪುರ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ತಾಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ, ಚುಸಾಪ ತಾಲೂಕು ಅಧ್ಯಕ್ಷ ಅಶೋಕ್ ಗುಡಿಕೋಟೆ, ಹಾಸ್ಯಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಇತರರಿದ್ದರು. 
ಜಿಲ್ಲೆ

ಅಂಡಗಿ ಸಾಹಿತ್ಯ ಪ್ರೀತಿ ಅಪಾರ ಅನುಕರಣೀಯ

ರುದ್ರಪ್ಪ ವಾಲಿ

ಗಂಗಾವತಿ: ನಗರದ ಕಸಾಪ ಭವನದ ಆವರಣದಲ್ಲಿ ಸಾಹಿತಿ ಮತ್ತು ಸಂಘಟಕ ಹನುಮಂತಪ್ಪ ಅಂಡಗಿಗೆ ನುಡಿನಮನ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಪಣೆಯೊಂದಿಗೆ ಮೌನಾಚರಣೆ ಸಲ್ಲಿಸಲಾಯಿತು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಅಜ್ಮೀರ್ ನಂದಾಪುರ ಮಾತನಾಡಿ, ಅಪಾರ ಸಾಹಿತ್ಯ ಪ್ರೀತಿ ಬೆಳೆಸಿಕೊಂಡಿದ್ದ ಅಂಡಗಿ, ಮೂವತ್ತಕ್ಕೂ ಹೆಚ್ಚು ಕತಿಗಳನ್ನು ರಚಿಸಿದ್ದಾರೆ. ಸ್ನೇಹ ಪ್ರೀತಿಯಿಂದ ಎಲ್ಲರನ್ನೂ ಗೌರವಿಸುತ್ತಿದ್ದ ಅಜಾತಶತೃವಾಗಿದ್ದ ಇವರ ನಡೆ ಅನುಕರಣೀಯ ಎಂದರು. ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕ ಪವನಕುಮಾರ ಗುಂಡೂರು ಮಾತನಾಡಿ, ಕ್ರಿಯಾಶೀಲವ್ಯಕ್ತಿತ್ವದ ಅಂಡಗಿ, ಚುಟುಕ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದರು ಎಂದರು.

ವಿವಿಧ ಸಂಘಟನೆ ಪದಾಧಿಕಾರಿಗಳಾದ ಎಚ್.ಎಂ.ಶೈಲಜಾ, ರಮೇಶ್ ಗಬ್ಬೂರು, ಕೆ.ಚನ್ನಬಸಯ್ಯಸ್ವಾಮಿ, ಜೋಗದ ನಾರಾಯಣಪ್ಪ ನಾಯಕ, ಸರ್ವೇಶ ವಸದ್, ಲಿಂಗಾರೆಡ್ಡಿ ವಿ. ಆಲೂರು, ಶಿವಕಾಂತ, ರುದ್ರೇಶ, ಮೈಲಾರಪ್ಪ ಬೂದಿಹಾಳ್, ಈ.ಧನರಾಜ, ಎ.ಕೆ.ಮಹೇಶಕುಮಾರ, ಕಾಸೀಂಅಲಿ ಮುದ್ದಾಬಳ್ಳಿ, ಪಂಪಣ್ಣನಾಯಕ ಇತರರಿದ್ದರು.