ಕೊಪ್ಪ: ಮರಿತೊಟ್ಟಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗಾರು ಉದ್ಭವ ಶ್ರೀ ಲಕ್ಷ್ಮೀನಾರಾಯಣ ಮತ್ತು ಉದ್ಭವ ಶ್ರೀ ಆಂಜನೇಯ ದೇವರ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.
ಅಂದಗಾರು, ಹುಲ್ಲುಮಕ್ಕಿ, ಕುಂಚೂರು, ಕೊಪ್ಪ, ಸೋಮ್ಲಾಪುರ, ಕಾಚ್ಗಲ್ ಸೇರಿದಂತೆ ನೆರೆಯ ಗ್ರಾಮಗಳಿಂದ ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ರಥವನ್ನು ಎಳೆದರು.
ಮಂಗಳವಾರ ಜಾತ್ರಾ ಮೋಹೋತ್ಸವ ಆರಂಭಗೊಂಡಿದ್ದು ಏ.18ರಮದು ಕುಂಕುಮೋತ್ಸವ, ಅವಭೃತ ಸ್ನಾನ, ವಸಂತಪೂಜೆ, 19ರಂದು ಪಲ್ಲಕ್ಕಿ ಉತ್ಸವ, 20ರಂದು ಸಂಪ್ರೋಕ್ಷಣ, ಕಲಶಾಭಿಷೇಕ, ದುರ್ಗಾಪೂಜೆ ಹಮ್ಮಿಕೊಳ್ಳಲಾಗಿದೆ.
ರಥೋತ್ಸವದಲ್ಲಿ ದೇವಸ್ಥಾನದ ವಹಿವಾಟುದಾರ ಎ.ಜಿ ಸುಬ್ರಹ್ಮಣ್ಯ, ಮಾಜಿ ಸಚಿವ ಡಿ.ಎನ್.ಜೀವರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು.