ಕುಣಿಗಲ್: ಪ್ರಚಲಿತ ವಿದ್ಯಮಾನಗಳನ್ನು ದಾಖಲಿಸಿ ಭವಿಷ್ಯದ ಪೀಳಿಗೆಗೆ ತಲುಪಿಸಬೇಕು. ಸಾರ್ವಜನಿಕ ಮತ್ತು ಖಾಸಗಿ ದಾಖಲೆಗಳು ರಾಷ್ಟ್ರದ ಆರ್ಥಿಕ, ಸಾಮಾಜಿಕ ಮತ್ತು ಸಾಂಸತಿಕ ಅಭಿವೃದ್ಧಿಯನ್ನು ಪ್ರತಿಬಿಂಬಿಸುವ ಮೂಲಾಧಾರಗಳಾಗಿವೆ ಎಂದು ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕ ಡಾ.ಗವಿಸಿದ್ದಯ್ಯ ಕರೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ಏರ್ಪಡಿಸಿದ್ದ ದಾಖಲೆಗಳ ಮಹತ್ವ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂರಸಿದ ದಾಖಲೆಗಳು ಇತಿಹಾಸದ ಪುರಾವೆಯಾಗಿ ವರ್ತಮಾನಕ್ಕೆ ಸಾಯಾಗಲಿದ್ದು, ಅವುಗಳನ್ನು ಸಂರಸಬೇಕು ಎಂದರು.
ರಾಷ್ಟ್ರದ ಪರಂಪರೆಯ ಅಮೂಲ್ಯ ಭಾಗವಾದ ದಾಖಲೆಗಳನ್ನು ಸಂಗ್ರಹಿಸಿ ಆಡಳಿತಗಾರರು, ವಿದ್ಯಾರ್ಥಿಗಳು ಮತ್ತು ವಿದ್ವಾಂಸರ ಸಂಶೋಧನೆಗೆ ನೆರವಾಗಲು ಮತ್ತು ಸರ್ಕಾರದ ಅಧಿಕೃತ ಸಾರ್ವಜನಿಕ ಆಕರಗಳಾಗಿ ಬಳಸಲು ಅವಕಾಶ ಕಲ್ಪಿಸಬೇಕು ಎಂದರು.
1866ರಿಂದ ಲಭ್ಯವಿರುವ ಸರ್ಕಾರದ ಗೆಜೆಟ್ ಪ್ರತಿಗಳು, ಐತಿಹಾಸಿಕ ಕಾಗದಪತ್ರದ ದಾಖಲೆಗಳು, ಯುದ್ಧ ಒಪ್ಪಂದದ ಪ್ರತಿ, ಬ್ರಿಟಿಷರು ಮತ್ತು ಸ್ಥಳಿಯ ಆಡಳಿತಗಾರರ ಒಪ್ಪಂದ, ಆದೇಶ ಪ್ರತಿಗಳು, ಮೆಕ್ರೋಟೇಪ್ ಫಿಲಂಗಳು ಮತ್ತು ಸುರಳಿಗಳು, ಭೂಪಟಗಳು ಸೇರಿ ಒಟ್ಟು 2,16,000 ದಾಖಲೆಗಳ 1.08 ಕೋಟಿ ಪುಟಗಳನ್ನು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಸ್ಕಾನ್ ಮಾಡಿ ಜಾಲತಾಣಕ್ಕೆ ಅಪ್ಲೋಡ್ ಮಾಡಲಾಗಿದೆ. ಸಾರ್ವಜನಿಕರು ಯಾವುದೇ ದಾಖಲೆಯನ್ನು ವೀಸಬಹುದು ಮತ್ತು ಡೌನ್ಲೋಡ್ ಮಾಡಿ ಬಳಸಿಕೊಳ್ಳಬಹುದು ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಈಶ್ವರಪ್ಪ ಮಾತನಾಡಿ, ಇತಿಹಾಸ ಅರಿಯದವರು ಇತಿಹಾಸ ಸಷ್ಟಿಸಲಾರರು ಎನ್ನುವ ಅಂಬೇಡ್ಕರ್ ಅವರ ಮಾತಿನಂತೆ ಹಿಂದಿನ ಟನೆಗಳು ಭವಿಷ್ಯದ ಅಡಿಪಾಯವಾಗಲಿವೆ. ದಾಖಲೆಗಳನ್ನು ಕ್ರೋಡಿಕರಿಸುವಲ್ಲಿ ಪುರಾತತ್ವ ಇಲಾಖೆಯ ಶ್ರಮ ಶ್ಲಾನೀಯ ಎಂದರು.
ಐಕ್ಯೂಎಸಿ ಸಂಚಾಲಕ ಡಾ.ಟಿ.ಎನ್.ನರಸಿಂಹಮೂರ್ತಿ ಮಾತನಾಡಿ, ಹಿಂದಿನ ಮಾಹಿತಿ ತಿಳಿಯಲು ದಾಖಲೆಗಳ ಅಧ್ಯಯನ ನೆರವಾಗುತ್ತದೆ ಎಂದರು. ಪ್ರಾಂಶುಪಾಲ ರಾಮಾಂಜನಪ್ಪ ಮಾತನಾಡಿದರು. ಡಾ.ರಾಧಾಕಷ್ಣ, ಡಾ.ಬಿ.ನಿರ್ಮಲಾ, ಡಾ.ಮೋಹನ ಕುಮಾರ್, ಸಿ.ಜಿ.ನಾಗಮಣಿ, ಡಾ.ನಾಗಮ್ಮ, ಡಾ.ಪಿ.ರಾಧ ಹಾಗೂ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಇದ್ದರು.