ಹುಬ್ಬಳ್ಳಿ: ತಾಲೂಕಿನ ಅಂಚಟಗೇರಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಮೈಲಾರ ದೇವರ ಜಾತ್ರೆ ಮಹೋತ್ಸವ ಡಿ. 18ರಿಂದ ಎರಡು ದಿನ ಆಯೋಜಿಸಲಾಗಿದೆ.
18ರಂದು ಬೆಳಗ್ಗೆ ಭಂಡಾರ ಪೂಜೆ ಕಟ್ಟುವುದು, ಸಂಜೆ 7ಕ್ಕೆ ಗ್ರಾಮದ ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ. 19ರಂದು ಬೆಳಗ್ಗೆ 9ಕ್ಕೆ ಭಂಡಾರ ಒಡೆಯುವುದು. ನಂತರ ಪಲ್ಲಕ್ಕಿ ಉತ್ಸವ ಜರುಗುವುದು.
ಸಂಜೆ 4ಕ್ಕೆ ಪವಾಡ ಕಾರ್ಯಕ್ರಮ. ಸರಪಳಿ, ದಾರ, ಆರತಿ ಇತ್ಯಾದಿ ಪವಾಡಗಳು ನಡೆಯಲಿವೆ. ದೋಣಿ ತುಂಬುವುದು ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ತಿಳಿಸಿದ್ದಾರೆ.