ಜಿಲ್ಲೆ

ಅಂಚನ್ ಮೂಲಸ್ಥಾನದಲ್ಲಿ ನಾಗರಪಂಚಮಿ

Mangaluru - Prakash MC Manjeshwar

ಮಂಗಳೂರು: ನಗರದ ಹೊರ ವಲಯದ ಪೋರ್ಕೊಡಿ ಪೇಜಾವರ ಕಡೆಂಬಿ ಸ್ಥಾನದಲ್ಲಿರುವ ಅಂಚನ್ ಮೂಲಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ನಾಗದೇವರಿಗೆ ಹಾಲು, ಸೀಯಾಳಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ, ತಂಬಿಲ ಸೇವೆಯೊಂದಿಗೆ ಮಹಾಪೂಜೆ ನಡೆಯಿತು.
ರವೀಂದ್ರ ಭಟ್  ಪೌರೋಹಿತ್ಯದಲ್ಲಿ ನಾಗರಪಂಚಮಿಯ ವಿಧಿ ವಿಧಾನಗಳು ನೆರವೇರಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.