ಬೆಂಗಳೂರು: ಅನಂತ ಕುಮಾರ್ ಪ್ರತಿಷ್ಠಾನ ಹಾಗೂ ಅದಮ್ಯ ಚೇತನ ಸಂಸ್ಥೆಗಳ ವತಿಯಿಂದ ಅನಂತ ಕುಮಾರ್ ಅವರ 66ನೇ ಜನ್ಮದಿನಾಚರಣೆ ಪ್ರಯುಕ್ತ "ಅನಂತ ಸ್ಮರಣೆ&ಅನಂತ ಪ್ರೇರಣೆ' ಕಾರ್ಯಕ್ರಮ ಗವಿಪುರದ ಧೋಂಡುಸಾ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆಯಿತು.
ಸಂಸದ ಪಿ.ಸಿ. ಮೋಹನ್, ಶಾಸಕ ರವಿ ಸುಬ್ರಮಣ್ಯ, ಅದಮ್ಯ ಚೇತನ ಅಧ್ಯೆ ತೇಜಸ್ವಿನಿ ಅನಂತ ಕುಮಾರ್, ಅನಂತ ಕುಮಾರ್ ಪ್ರತಿಷ್ಠಾನ ಅಧ್ಯಕ್ಷ ಪಿ.ವಿ. ಕೃಷ್ಣ ಭಟ್ ಮತ್ತಿತರರು ಅನಂತ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಸೂಚಿಸಿದರು.
ಪ್ರತಿಷ್ಠಾನದ ಕಾರ್ಯಕರ್ತ ಜಿ.ಎಂ. ಇನಾಂದಾರ್ ಪ್ರಸ್ತಾವಿಕವಾಗಿ ಮಾತನಾಡಿ, ಅನ್ನ, ಅಕ್ಷರ, ಆರೋಗ್ಯ, ಪ್ರಕೃತಿ ಹಾಗೂ ಸಂಸತಿ ಎಂಬ ಧ್ಯೇಯ ವಾಕ್ಯದೊಂದಿಗೆ ಅನೇಕ ಸಮಾಜಮುಖಿ ಚಟುವಟಿಕೆಗಳನ್ನು ಅದಮ್ಯ ಚೇತನ ಸಂಸ್ಥೆ ಮಾಡುತ್ತಿದ್ದು, ತೇಜಸ್ವಿನಿ ಅನಂತ ಕುಮಾರ್ ನೇತೃತ್ವದಲ್ಲಿ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ರಾಜಸ್ಥಾನದ ಜೋಧ್ಪುರ ಸೇರಿ ಒಟ್ಟಾರೆ ಒಂದೂವರೆ ಲಕ್ಷ ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟ, ಉಪಾಹಾರ, ಬಿಸಿಹಾಲು ಯೋಜನೆ, ಆರೋಗ್ಯ ಚೇತನ, ಗ್ರಾಮ ಚೇತನ, ಮಹಿಳಾ ಸಬಲೀಕರಣ, ಹಸಿರು ಜೀವನ ಶೈಲಿಗಾಗಿ ಸಸ್ಯಾಗ್ರಹ, ಸೇವಾ ಉತ್ಸವ, ಚಿಣ್ಣರ ಚೇತನ ದೇಗುಲ ದರ್ಶನ ಮುಂತಾದ ಹಲವಾರು ಯೋಜನೆಗಳನ್ನು 2016ರಿಂದಲೂ ಮಾಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ "ಅನಂತ ಗೀತ ಕಥನ' ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಪ್ರತಿಷ್ಠಾನದ ಪತ್ರಿಕೆಯ ವಿಶೇಷ ಪುರವಣಿಯನ್ನು ಬಿಡುಗಡೆಗೊಳಿಸಲಾಯಿತು. ಅನಂತ ಸ್ಮರಣೆಯ ಅಂಗವಾಗಿ ಅನಂತ ಕುಮಾರ್ ಜೀವನ ಪಯಣದ ಕುರಿತು ಸಾಕ್ಷ$್ಯಚಿತ್ರವನ್ನು ಪ್ರದರ್ಶಿಸಲಾಯಿತು. ಅನಂತ ಕುಮಾರ್ ಪ್ರತಿಷ್ಠಾನದ ನೇತೃತ್ವ ವಿಕಸನದ ಭಾಗವಾಗಿ ಯುವ ರಾಯಭಾರಿ ಪ್ರಕಲ್ಪಕ್ಕೆ ಚಾಲನೆ ನೀಡಲಾಯಿತು. ಬಿಜೆಪಿ ಮುಖಂಡರಾದ ವೇದವ್ಯಾಸ ಭಟ್, ರಮೇಶ್, ಸದಾಶಿವ, ಸುಬ್ಬಣ್ಣ ಮತ್ತಿತರರು ಇದ್ದರು.