ಜಿಲ್ಲೆ

ಅನಂತಕುಮಾರ ಹೆಗಡೆ ಕ್ಷಮೆ ಕೇಳಬೇಕು

ಮಂಜುನಾಥ ಅಂಗಡಿ

ಧಾರವಾಡ: ಸಂವಿಧಾನದಿ೦ದ ಸೆಕ್ಯುಲರ್ ಪದವನ್ನು ತೆಗೆಯಬೇಕು ಎಂಬ ಸಂಸದ ಅನಂತಕುಮಾರ ಹೆಗಡೆ ಅವರ ಹೇಳಿಕೆ ಅನವಶ್ಯಕ. ಈ ರೀತಿಯ ಹೇಳಿಕೆಯಿಂದ ಜನರ ಭಾವನೆಗೆ ಧಕ್ಕೆಯಾಗುತ್ತದೆ. ಅವರು ಕ್ಷಮೆ ಕೇಳಬೇಕು. ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತಕುಮಾರ ಹೆಗಡೆ ಜನರ ಸಮಸ್ಯೆ, ತೊಂದರೆಗಳ ಬಗ್ಗೆ ಮಾತನಾಡಬೇಕು. ಅದನ್ನು ಬಿಟ್ಟು ಸಂಬAಧ- ಸೂತ್ರವಿಲ್ಲದ ವಿಷಯದ ಬಗ್ಗೆ ಮಾತನಾಡುವುದರಿಂದ ನಮಗೂ ಧಕ್ಕೆ ಆಗುತ್ತಿದೆ ಎಂದರು.
ಧಾರವಾಡ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಟಿಕೆಟ್ ಖಚಿತ. ಇದರಲ್ಲಿ ಸಂಶಯವಿಲ್ಲ. ರಾಜ್ಯದ ಉಳಿದ ಕ್ಷೇತ್ರಗಳಿಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಂಡು ಟಿಕೆಟ್ ಹಂಚಿಕೆ ಮಾಡಲಿದ್ದಾರೆ. ಈಗಾಗಲೇ ಕ್ಷೇತ್ರಗಳಲ್ಲಿ ಸಾರ್ವಜನಿಕರಿಂದ ಸರ್ವೇ ಮಾಡಲಾಗಿದೆ ಎಂದರು.