ಹೊನ್ನಾವರ: ತಾಲೂಕಿನ ಕಾನಗೋಡ ಶ್ರೀ ಚೆನ್ನಕೇಶವ ದೇವರ ಸನ್ನಿಧಿಯಲ್ಲಿ ‘ಅನಂತ ಚತುರ್ದಶಿ’ ನಿಮಿತ್ತ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಗುರುವಾರ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ದೇವತಾ ಪ್ರಾರ್ಥನೆ, ಅನಂತ ಚತುರ್ಥಿ ವೃತಾಚರಣೆ, ವಿಶೇಷ ಪುಷ್ಪಾಲಂಕಾರ, ಮಹಾಮಂಗಳಾರತಿ, ಮಹಾನೈವೇದ್ಯ ನಡೆಯಿತು.
ರೈತರು ತಮ್ಮ ಹೊಲ, ತೋಟದಲ್ಲಿ ಬೆಳೆದ ಬೆಳೆಯ ವಿವಿಧ ರೀತಿಯ ಫಲವನ್ನು ಶ್ರೀ ದೇವರಿಗೆ ಫಲಾವಳಿಯ ರೂಪದಲ್ಲಿ ಸಲ್ಲಿಸಿ ಬೆಳೆ ಸಮ್ರದ್ದಿಯಾಗಲಿ ಎಂದು ಬೇಡಿಕೊಂಡರು. ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು. ಫಲಾವಳಿ ಸವಾಲು ನಡೆಯಿತು. ಶ್ರೀ ದೇವರ ಅಲಂಕಾರ, ಬಾಳೆದಿಂಡಿನ ದಂಡಾವಳಿ ಆಕರ್ಷಣೀಯವಾಗಿತ್ತು. ತಾಲೂಕಿನ ವಿವಿಧೆಡೆಯಿಂದ ಭಕ್ತರು ಆಗಮಿಸಿ ಹಣ್ಣು, ಕಾಯಿ ಸಮರ್ಪಿಸಿ ವಿವಿಧ ಸೇವೆ ಸಲ್ಲಿಸಿದರು.