ವಿಜಯವಾಣಿ ಸುದ್ದಿಜಾಲ ಗದಗ
ಆನಂದ ವೃದ್ಧಾಶ್ರಮದಲ್ಲಿ ಇರುವ ಹಿರಿಯ ನಾಗರಿಕರು ಜೀವನದ ಸಂಧ್ಯಾ ಕಾಲವನ್ನು ಆನಂದ, ಆರೋಗ್ಯ, ಸುಖ ಶಾಂತಿ ನೆಮ್ಮದಿಯಿಂದ ಜೀವನ ನಡೆಸಲಿ ಎಂದು ಕರ್ನಾಟಕ ರಾಜ್ಯ ಚೇಂಬರ್ ಆ್ ಕಾಮರ್ಸ ಅಧ್ಯ ಎಸ್. ಪಿ. ಸಂಶಿಮಠ ಹೇಳಿದರು.
ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿರುವ ಮಾತೃ ಪುನರ್ ಮಿಲನ ಸೇವಾ ಸಮಿತಿಯಲ್ಲಿ ಮಂಗಳವಾರ ಜರುಗಿದ ವಿವಿಧ ೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೃದ್ಧಾಶ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಆಗುತ್ತಿವೆ. ಸಮಾಜದ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಅಲ್ಲ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಇದೊಂದು ಸಮುದಾಯದ ಅನಿವಾರ್ಯ ಭಾಗ ಆಗಿರುವುದು ವಿಷಾಧನೀಯ. ಇಂತಹ ಸಂದರ್ಭದಲ್ಲಿ ಮಾತೃ ಪುನರ್ ಮಿಲನ ಸೇವಾ ಸಮಿತಿಯು ಆತಂಕದ ಸ್ಥಿತಿಯಲ್ಲಿರುವ ವಯೋವೃದ್ಧರಿಗೆ ಎಲ್ಲ ಅನುಕೂಲಕರ ಸೌಲಭ್ಯಗಳನ್ನು ಒದಗಿಸಿಕೊಟ್ಟು ಅವರು ಪ್ರಶಾಂತವಾದ ವಾತಾವರಣದಲ್ಲಿ ಬದುಕುವಂತೆ ಮಾಡುತ್ತಿರುವುದು ಶ್ಲಾನೀಯ. ನಿರಂತರ ಶ್ರಮ ವಹಿಸುತ್ತಿರುವ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯ ಗಂಗಾಧರ ನಭಾಪೂರ ಅವರ ಸೇವಾ ಕಾರ್ಯ ಅತ್ಯಂತ ಸ್ತುತ್ಯಾರ್ಹವಾಗಿದೆ. ದಾನಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಅವರ ಈ ಸೇವಾ ಚಟುವಟಿಕೆಗಳಿಗೆ ತನು&ಮನ&ಧನದಿಂದ ಸಹಾಯ ಸಹಕಾರ ಸಲ್ಲಿಸಬೇಕು ಎಂದರು.
ಎಸ್ಎಸ್ಕೆ ಸಮಾಜದ ಮಾಜಿ ಅಧ್ಯ ಈಶ್ವರಸಾ ಮೇರವಾಡೆ ಮಾತನಾಡಿ ಸಂಸ್ಥೆಗೆ ತಮ್ಮ ಸಮಾಜ ಬಾಂಧವರ ವತಿಯಿಂದ ಸಕಲ ರೀತಿಯ ಸಹಾಯ ಸಹಕಾರ ಸಲ್ಲಿಸುವುದಾಗಿ ಹೇಳಿದರು.
ತಾಪಂ ಸಹಾಯಕ ನಿರ್ದೇಶಕ ಕುಮಾರ ಪೂಜಾರ ಮಾತನಾಡಿ, ತಾಲೂಕು ಪಂಚಾಯತಿ ವತಿಯಿಂದ ವೃದ್ಧಾಶ್ರಮಕ್ಕೆ ಬೇಕಾದ ಸಹಾಯ ಸಹಕಾರವನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ವಿದ್ಯಾದಾನ ಸಮಿತಿ ಬಾಲಕಿಯರ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಬಿ. ಎಸ್. ರಾಠೋಡ, ಕುಮಾರ ಪೂಜಾರ ಅವರನ್ನು ಸನ್ಮಾನಿಸಾಯಿತು.
ಕೀರಸಾ ಭಾಂಡಗೆ, ಮೋತಿಲಾಲ ಪೂಜಾರ, ಗಂಗಾಧರ ನಭಾಪೂರ, ವೆಂಕಟೇಶ ಕುಲಕಣಿರ್, ಸುರೇಶ ರೇವಣಕರ, ಪಾಂಡು ಚವಾಣ, ಸವಿತಾ ನಭಾಪೂರ, ದೇವಾನಂದ ಪೂಜಾರ, ರುನಾಥಸಾ ಖಟವಟೆ ಹಲವರು ಇದ್ದರು.