ಆನಂದ್ ಸಿ.ಕುಂದರ್ ಜನ್ಮದಿನ ಪ್ರಯುಕ್ತ ಕೋಟದ ಪಂಚವರ್ಣ ಸಂಘಟನೆ ವತಿಯಿಂದ ಹೊಸಬದುಕು ಆಶ್ರಮಕ್ಕೆ ಕುರ್ಚಿ, ದಿನಸಿ ಸಾಮಗ್ರಿ ನೀಡಲಾಯಿತು.  
ಜಿಲ್ಲೆ

ಆನಂದ್ ಕುಂದರ್ ಸಮಾಜಕ್ಕೆ ಮಾದರಿ

Karthika K.S

ವಿಜಯವಾಣಿ ಸುದ್ದಿಜಾಲ ಕೋಟ

ಆನಂದ್ ಸಿ.ಕುಂದರ್ ಅವರ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಿದೆ. ಅಂತಹ ವ್ಯಕ್ತಿಯ ಜನ್ಮದಿನ ಆಚರಿಸುವ ಪಂಚವರ್ಣದ ಕಾರ್ಯ ಅರ್ಥಪೂರ್ಣ ಎಂದು ಜಗದೀಶ್ ನಾವಡ ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲ, ಸಮುದ್ಯತಾ ಗ್ರೂಪ್ಸ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಆನಂದ್ ಸಿ.ಕುಂದರ್ ಅವರ 77ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ನ್ಯೂನತೆಗಳನ್ನು ತಿದ್ದಿ ಅದೆಷ್ಟೋ ಬಡವರಿಗೆ ಆಶಾಕಿರಣವಾದ ಕುಂದರ್ ಹೃದಯ ಶ್ರೀಮಂತ್ರಿಕೆ ಶ್ಲಾಘನಾರ್ಹ ಎಂದರು.

ಆನಂದ್ ಸಿ.ಕುಂದರ್ ವತಿಯಿಂದ ಉಡುಪಿಯ ಹೊಸಬದುಕು ಆಶ್ರಮಕ್ಕೆ 20 ಕುರ್ಚಿಗಳು, ದಿನಸಿ ವಸ್ತುಗಳು, ಹಣ್ಣುಗಳನ್ನು ವಿತರಿಸಲಾಯಿತು. ಆಶ್ರಮದ ಮುಖ್ಯಸ್ಥ ಹ.ರಾ.ವಿನಯಚಂದ್ರ ಸಾಸ್ತಾನ ಸ್ವೀಕರಿಸಿದರು.

ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ, ಸಮುದ್ಯತಾ ಗ್ರೂಪ್ಸ್ ಮುಖ್ಯಸ್ಥ ಯೋಗೇಂದ್ರ ತಿಂಗಳಾಯ, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಕೋಟ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಅಜಿತ್ ಆಚಾರ್ ಸ್ವಾಗತಿಸಿದರು. ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ವಂದಿಸಿದರು.