ಜಿಲ್ಲೆ

ಕರಾಟೆ ಸ್ಪರ್ಧೆಯಲ್ಲಿ ; ಬೆಳಗಾವಿಯ ಸ್ಪೋರ್ಟ್ಸ್ ಕರಾಟೆ-ಡು ಸ್ಕೂಲ್ ಛಾಂಪಿಯನ್

ಬೆಳಗಾವಿ :  ನಗರದಲ್ಲಿನ ಫ್ಲೈಯಿಂಗ್ ಫೀಟ್ ಸ್ಪೋರ್ಟ್ಸ್ ಅಕಾಡೆಮಿ ಇತ್ತೀಚೆಗೆ ಆಯೋಜಿಸಿದ್ದ ಓಪನ್ ಕರಾಟೆ ಛಾಂಪಿಯನ್‌ಷಿಫ್‌ನಲ್ಲಿ ಬೆಳಗಾವಿಯ ಆನಂದ ಅಕಾಡೆಮಿಯ ಯುವ ಸ್ಪೋರ್ಟ್ಸ್ ಕರಾಟೆ-ಡು ಮಾಸ್ಟರ್ ಆರ್ಟ್ಸ್ ಸ್ಕೂಲ್ ಛಾಂಪಿಯನ್ ಆಗಿ ಹೊರಹೊಮ್ಮಿತು.

ಇಲ್ಲಿಯ ಮಹಾಂತೇಶ ನಗರದಲ್ಲಿ ಜು.29 ಮತ್ತು 30ರಂದು ಆಯೋಜಿಸಿದ್ದ ಓಪನ್ ಕರಾಟೆ ಛಾಂಪಿಯನ್‌ಷಿಪ್‌ನಲ್ಲಿ ವಿವಿಧ ವಿಭಾಗಳಲ್ಲಿ ಕರಾಟೆ ಮಾಸ್ಟರ್ ಆನಂದ ಪೂಜಾರಿ ಮಾರ್ಗದರ್ಶನದಲ್ಲಿ ಯಶ್ ಬಾಗೇವಾಡಿ, ಪ್ರೀತಮ್ ಕೋಟಿ, ಓಂಕಾರ, ತಿಲಕ, ಅಲಿಶ್ ಮುಲ್ಲಾ, ಜಗದೀಶ ಹಾಗೂ ಸಂಸ್ಕಾರ್ ಕರಾಟೆ ಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ವಿವಿಧ ಪ್ರಶಸ್ತಿಗಳಿಗೆ ಭಾಜನರಾದರು.