ಜಿಲ್ಲೆ

'ಮೋದಿ ಇರೋದ್ಕೆ ಅವನು ಬದ್ಕಿದಾನೆ'; ದುಷ್ಕರ್ಮಿಗಳ ಕಿಡಿಗೇಡಿತನ ಕಂಡು ಬಾಯಿಗೆ ಬಂದ ಹಾಗೆ ಬೈದ ಮಹಿಳೆ..

ಚಿಕ್ಕಮಗಳೂರು: ದುಷ್ಕರ್ಮಿಗಳ ಕಿಡಿಗೇಡಿತನ ಕಂಡು ಸಿಟ್ಟಾದ ಮಹಿಳೆಯೊಬ್ಬರು ಅಂಥ ಕಿಡಿಗೇಡಿಗಳನ್ನು ಉದ್ದೇಶಿಸಿ ಬಾಯಿಗೆ ಬಂದ ಹಾಗೆ ಬೈದು ಹಿಡಿಶಾಪ ಹಾಕಿದ್ದಾರೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕಮರಗೋಡಿನಲ್ಲಿ ಇಂಥದ್ದೊಂದು ಪ್ರಕರಣ ಕಂಡುಬಂದಿದೆ.

ಕೇಂದ್ರ ಸರ್ಕಾರದ ಯೋಜನೆ ಕುರಿತ ಪ್ರಚಾರಕ್ಕಾಗಿ ಹಾಕಿರುವ ಫಲಕದಲ್ಲಿ ಇರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಫೋಟೋ ಗಲೀಜು ಮಾಡಿರುವುದೇ ಈ ಮಹಿಳೆಯ ಸಿಟ್ಟಿಗೆ ಕಾರಣ. ಕಿಡಿಗೇಡಿಗಳು ಎಲೆಅಡಿಕೆ ತಿಂದು ಫೋಟೋ ಮೇಲೆ ಉಗಿದು ಗಲೀಜು ಮಾಡಿದ್ದರು.

ಹೀಗೆ ಮೋದಿ ಫೋಟೋವನ್ನು ಯಾರೋ ಗಲೀಜು ಮಾಡಿ ಹೋಗಿದ್ದನ್ನು ಕಂಡ ಈ ಮಹಿಳೆ, ಅವಾಚ್ಯ ಶಬ್ದಗಳಿಂದ ಅವರಿಗೆ ಬೈದಿದ್ದಾರೆ. 'ಮೋದಿ ಏನು ಮಾಡಿದ್ದಾರೆ, ಅವರು ದೇವರ ಸಮಾನ. ಮೋದಿ ಇರೋದ್ಕೆ ಅವನು ಬದ್ಕಿದಾನೆ' ಎಂದು ಗಲೀಜು ಮಾಡಿದ ಕಿಡಿಗೇಡಿಗಳನ್ನು ಬೈದಿದ್ದಲ್ಲದೆ, ಆ ಕಿಡಿಗೇಡಿಗಳು ನಾಶವಾಗಿ ಹೋಗುತ್ತಾರೆ ಎಂದೂ ಹಿಡಿಶಾಪ ಹಾಕಿದ್ದಾರೆ. ಮಾತ್ರವಲ್ಲದೆ, ಆಕೆ ಸ್ವತಃ ಪ್ರಧಾನಿ ಫೋಟೋವನ್ನು ನೀರಿನಿಂದ ಉಜ್ಜಿ ತೊಳೆದು ಸ್ವಚ್ಛಗೊಳಿಸಿದ್ದಾರೆ. ಈ ಕುರಿತ ವಿಡಿಯೋ ಕೂಡ ವೈರಲ್​ ಆಗಿದೆ.