ಅರಕಲಗೂಡು ತಾಲೂಕು ಮದಲಾಪುರ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶೋಭ ಪರಮೇಶ್ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು. ಎಂ.ಆರ್.ರಂಗಸ್ವಾಮಿ, ಎಂ.ಆರ್.ಮಂಜುನಾಥ್ ಇತರರು ಇದ್ದರು. 
ಜಿಲ್ಲೆ

ಹಾಲು ಉತ್ಪಾದಕರ ಮಹಿಳಾ ಸಂಘಕ್ಕೆ ಅವಿರೋಧ ಆಯ್ಕೆ

ಅರಕಲಗೂಡು: ತಾಲೂಕಿನ ಮದಲಾಪುರ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಶುಕ್ರವಾರ ಶೋಭ ಪರಮೇಶ್ ಅವಿರೋಧವಾಗಿ ಆಯ್ಕೆಯಾದರು.

ಗ್ರಾಮದ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಶೋಭ ಪರಮೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಅರಕಲಗೂಡು ಸಹಕಾರ ಇಲಾಖೆ ಅಧಿಕಾರಿ ನವೀನ್ ಅವರು ಶೋಭಾ ಪರಮೇಶ್ ಅವರ ಅವಿರೋಧ ಆಯ್ಕೆ ಪ್ರಕಟಿಸಿದರು. ನಿರ್ದೇಶಕರಾದ ಮಂಜುಳಾ, ಕಮಲಾ, ರತ್ನಾ, ಗೌರಮ್ಮ, ಜಯಮ್ಮ, ಸುಂದರಮ್ಮ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷರಾಗಿ ಆಯ್ಕೆಯಾದ ಶೋಭಾ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು. ಗ್ರಾಪಂ ಸದಸ್ಯ ಎಂ.ಆರ್.ರಂಗಸ್ವಾಮಿ, ಮುಖಂಡ ಎಂ.ಆರ್.ಮಂಜುನಾಥ್ ಇತರರು ಇದ್ದರು.