ಜಿಲ್ಲೆ

ದೇವಿಮನೆ ಘಟ್ಟದ ಕ್ಷೇತ್ರಪಾಲ ಮಂದಿರದ ಹಿಂಭಾಗದಲ್ಲಿ ಅಪರಿಚಿತ ಶವ ಪತ್ತೆ

ಕುಮಟಾ: ಕುಮಟಾ- ಶಿರಸಿ ಹೆದ್ದಾರಿಯಲ್ಲಿ ದೇವಿಮನೆ ಘಟ್ಟದ ಮಾಸ್ತಿಮನೆ ಕ್ಷೇತ್ರಪಾಲ ಮಂದಿರದ ಹಿಂಭಾಗದಲ್ಲಿ ಶನಿವಾರ ಬೆಳಗ್ಗೆ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ.


ಮೃತನು ಸುಮಾರು 35- 40 ವರ್ಷದವರಾಗಿದ್ದು, ಬಿಳಿ ಬಣ್ಣದ ಜುಬ್ಬಾ, ಕೆಂಪು, ಕಪ್ಪು, ನೀಲಿ ಬಣ್ಣದ ಗೆರೆಯುಳ್ಳ ಲುಂಗಿ ಧರಿಸಿದ್ದಾರೆ. ಹುಬ್ಬು ಹಾಗೂ ಕಿವಿ ಹಿಂಭಾಗದಲ್ಲಿ ಗಾಯ ಕಂಡುಬಂದಿದೆ.

ಯಾರೋ ಬೇರೆಡೆ ಕೊಲೆ ಮಾಡಿ ಎಸೆದು ಹೋಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಕುಮಟಾ ಪೊಲೀಸರು ಎರಡು ತಂಡ ರಚಿಸಿ ತನಿಖೆ ಆರಂಭಿಸಿದ್ದಾರೆ.