ತೇರದಾಳ ಪಟ್ಟಣದ ವಿರಕ್ತಮಠದ ಸಭಾಂಗಣದಲ್ಲಿ ನಡೆದ ಕಸಾಪ ದತ್ತಿ ಪ್ರಶಸ್ತಿ ಪುರಸ್ಕೃತ ‘ಭೂಮಿಗೆ ಬಿದ್ದ ಬೀಜ ನಾಟಕ’ ಕೃತಿಯ ಅವಲೋಕನ ಕಾರ್ಯಕ್ರಮ ನಡೆಯಿತು. ಕೃತಿಕಾರ ಎಸ್.ಆರ್. ರಾವಳ, ಬುಜಬಲಿ ಕೆಂಗಾಲಿ, ಮಂಜುನಾಥ ಬೋಳಗೊಂಡ ಇದ್ದರು. 
ಜಿಲ್ಲೆ

ಭೂಮಿಗೆ ಬಿದ್ದ ಬೀಜ ನಾಟಕ ಕೃತಿಯ ಅವಲೋಕನ

ತೇರದಾಳ: ನಾಟಕ ರಚನೆಗೆ ಸತ್ಯ ಸಂಗತಿಗಳೇ ಪ್ರಭಾವಿತವಾಗಿವೆ. ಹಾಗಾಗಿ ನಾಟಕದ ಪ್ರತಿ ಪಾತ್ರಗಳು ಉತ್ತಮವಾಗಿ ಮೂಡಿಬಂದಿವೆ ಎಂದು ಸಾಹಿತಿ, ಕೃತಿ ರಚನೆಕಾರ, ಲೇಖಕ ಎಸ್.ಆರ್. ರಾವಳ ಹೇಳಿದರು.

ಪಟ್ಟಣದ ವಿರಕ್ತಮಠದ ಸಭಾಂಗಣದಲ್ಲಿ ನಡೆದ ಕಸಾಪ ದತ್ತಿ ಪ್ರಶಸ್ತಿ ಪುರಸ್ಕೃತ ‘ಭೂಮಿಗೆ ಬಿದ್ದ ಬೀಜ ನಾಟಕ’ ಕೃತಿಯ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಂಜುನಾಥ ಬೋಳಗೊಂಡ, ವೇದಿಕೆ ಅಧ್ಯಕ್ಷ ಬುಜಬಲಿ ಕೆಂಗಾಲಿ ಮಾತನಾಡಿ, ಮನುಷ್ಯನ ಬದುಕಿನ ಪ್ರತಿಬಿಂಬ ನಾಟಕವಾಗಿರುತ್ತದೆ. ಎಸ್.ಆರ್. ರಾವಳ ಓರ್ವ ಉತ್ತಮ ಕೃತಿಕಾರರಾಗಿದ್ದಾರೆ. ಅವರಿಂದ ಇನ್ನಷ್ಟು ಉತ್ತಮ ಕೃತಿಗಳು ಹೊರಬರಲಿ ಎಂದು ಆಶಿಸಿದರು.

ಸಾಹಿತಿ, ಕಲಾವಿದರಾದ ಸತ್ಯಪ್ಪ ಸುಣಗಾರ, ಶಿವಾನಂದ ಗುರವ ಹಾಗೂ 2023-24ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ವೃಷಭ ಆಳಗೊಂಡ, ಸಂಪತ್‌ಕುಮಾರ ಡುಮ್ಮನವರ ಅವರನ್ನು ಸನ್ಮಾನಿಸಲಾಯಿತು.

ಊರಿನ ಹಿರಿಯರು, ಶರಣ ಶರಣೆಯರು, ಕಲಾವಿದರು, ಸಾಹಿತಿಗಳು ಇದ್ದರು. ಕಾರ್ಯಕ್ರಮವನ್ನು ಪದ್ಮಸಾಗರ ನಾಗನೂರ ನಿರೂಪಿಸಿ, ನಿರ್ವಹಿಸಿದರು.