ಜಿಲ್ಲೆ

ಸಾಮಾಜಿಕ ಪ್ರಜ್ಞೆಯನ್ನು ತ್ರಿಪದಿ ಮೂಲಕ ಸಾರಿದ ಸರ್ವಜ್ಞ: ಎಂ.ಕೆ.ಸೋಮಶೇಖರ್

ಮೈಸೂರು: ಮೈಸೂರು ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆಯಿಂದ ತ್ರಿಪದಿ ಕವಿ ಸರ್ವಜ್ಞ ಜಯಂತಿ ಅಂಗವಾಗಿ ಸರ್ವಜ್ಞ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ವಿವಿಧ ಕ್ಷೇತ್ರದವರಿಗೆ ಸರ್ವಜ್ಞ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರದ ಅಗ್ರಹಾರ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ. ಮಹದೇವ್ (ರಾಜಕೀಯ ಕ್ಷೇತ್ರ), ಕೆ. ರಘುರಾಮ್ ವಾಜಪಾಯಿ (ಸಾಮಾಜಿಕ ಕ್ಷೇತ್ರ), ರಮ್ಯಾ (ಸಮಾಜ ಸೇವೆ), ಎಚ್.ಎನ್.ಶ್ರೀಕಾಂತ್ ಕಶ್ಯಪ್ (ಧಾರ್ಮಿಕ ಕ್ಷೇತ್ರ), ನಾಗರತ್ನ (ಕುಂಬಾರಿಕೆ), ರಾಜೇಶ್ (ಕಲಾ ಕ್ಷೇತ್ರ), ಪ್ರವೀಣ್ (ಕ್ರೀಡಾ ಕ್ಷೇತ್ರ), ಹಿರಿಯಣ್ಣ (ಪರಿಸರ ಕ್ಷೇತ್ರ) ಅವರನ್ನು ಸನ್ಮಾನಿಸಲಾಯಿತು.

ಪ್ರಶಸ್ತಿ ನೀಡಿ ಮಾತನಾಡಿದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ತ್ರಿಪದಿ ಬ್ರಹ್ಮ ಸರ್ವಜ್ಞ ಅವರು ತಿಳಿಸದ ವಿಷಯಗಳೇ ಇಲ್ಲ. ಮನುಷ್ಯನಿಗೆ ಬೇಕಾಗುವ ನೀತಿ ಮತ್ತು ಸಾಮಾಜಿಕ ಪ್ರಜ್ಞೆ ಆದರ್ಶದ ಬದುಕಿನ ಮಹತ್ವವನ್ನು ತಮ್ಮ ತ್ರಿಪದಿಗಳ ಮೂಲಕ ಜಗತ್ತಿಗೆ ಸಾರಿದ್ದಾರೆ ಎಂದರು.

ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸದಿಂದ ಜನಪ್ರಿಯವಾಗಿದ್ದವು. ಬಹು ಮುಖ್ಯವಾಗಿ ನೈತಿಕ ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಒಳಗೊಂಡಿದ್ದವು. ಅಂತಹ ಮಹಾತ್ಮರ ಹೆಸರಿನಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಸಮಯೋಚಿತ ಮತ್ತು ಅರ್ಥಪೂರ್ಣ ಎಂದು ತಿಳಿಸಿದರು.

ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಮೇಲುಕೋಟೆ ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮಿ, ನಗರಪಾಲಿಕೆ ಮಾಜಿ ಸದಸ್ಯ ಪಾರ್ಥಸಾರಥಿ, ಸಾಹಿತಿ ಬನ್ನೂರು ಕೆ. ರಾಜು, ಕನ್ನಡ ಪರ ವೇದಿಕೆಯ ಬಾಲಕೃಷ್ಣ, ವಾಲ್ಮೀಕಿ ನಿಗಮ ಸದಸ್ಯ ದೇವರಾಜು ಕಾಟೂರು, ಮುಖಂಡರಾದ ರಮೇಶ್, ಅನಂತ, ಯದುನಂದನ್, ನಾಗರಾಜು, ಯಶವಂತ, ಲಲಿತಮ್ಮ, ಭಾಗ್ಯಲಕ್ಷ್ಮ್ಮಿ, ಯಮುನಾ, ಸುಮಿತ್ರಾ, ನಿರ್ಮಲ, ನಾಗರತ್ನ, ಸಿದ್ಧ ಮಲ್ಲೇಶ್ ಮಾತೃ ಭೂಮಿ, ಶಿವರಾಜು, ಕೃಷ್ಣ ಮೂರ್ತಿ, ಮಹದೇವು (ಕೇಬಲ್), ಗುರುಸ್ವಾಮಿ, ಮಂಜುನಾಥ್, ಕೆ.ಪಿ ವೆಂಕಟೇಶ್, ವಿಶ್ವೇಶ್ವರ, ಮರಶೆಟ್ಟಿ ಇತರರಿದ್ದರು.