ಎಐ ಬಳಸಿ ಹಿಂದೂ ದೇವತೆಗಳಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಮಂಗಳೂರು ಉರ್ವ ಪೊಲೀಸ್ ಠಾಣೆಗೆ ಹಿಂದೂ ಜನಜಾೃತಿ ಸಮಿತಿಯಿಂದ ದೂರು ನೀಡಲಾಗಿದೆ. ಈಬಗ್ಗೆ ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಕೀಲರಾದ ಈಶ್ವರ ಕೊಟ್ಟಾರಿ, ಯತೀಶ್, ವಿಜಯ ಕುಮಾರ್, ಸುಷ್ಮಾ, ಉದ್ಯಮಿಗಳಾದ ದಿನೇಶ್ ಎಂ. ಪಿ. ಚಂದ್ರಕಾಂತ್ ಕಾಮತ್ ಮತ್ತಿತರರು ಇದ್ದರು. 
ಜಿಲ್ಲೆ

ಎಐ ಬಳಸಿ ಹಿಂದೂ ದೇವತೆಗಳಿಗೆ ಅಪಮಾನ, ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

Mangaluru - Shravan Kumar Nala

ಮಂಗಳೂರು : ಫ್ಯಾಕ್ಟ್ ವಿಡ್ ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ ಅನೇಕ ದಿನಗಳಿಂದ ಕೃತಕ ಬುದ್ದಿಮತ್ತೆ (ಎಐ) ತಾಂತ್ರಿಕ ಸಹಾಯದಿಂದ ಹಿಂದೂ ದೇವತೆಗಳ ಅಪಮಾನಾತ್ಮಕ ಮತ್ತು ಅಶ್ಲೀಲ ಫೋಟೋಗಳನ್ನು ನಿರಂತರವಾಗಿ ಫೇಸ್ಬುಕ್ ಜಾಲತಾಣದ ಮುಖಾಂತರ ಪ್ರಸಾರ ಮಾಡಲಾಗುತ್ತಿದೆ. ಈಬಗ್ಗೆ ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಅಭಿವ್ಯಕ್ತಿ ಸ್ವಾತಂತ್ರೃ ಎಂದು ತಮ್ಮ ಬಗ್ಗೆ ಬರೆದುಕೊಂಡ ಫ್ಯಾಕ್ಟ್ ವಿಡ್ ಫೇಸ್ಬುಕ್ ಪೇಜ್‌ನಲ್ಲಿ ಪ್ರತಿದಿನ 7 ರಿಂದ 8 ಹಿಂದೂ ದೇವತೆಗಳ ಅಪಮಾನಾತ್ಮಕ ಮತ್ತು ಅಶ್ಲೀಲ ಫೋಟೋಗಳು ಪ್ರಸಾರವಾಗುತ್ತಿದ್ದು, ಇದರಲ್ಲಿ ಹಿಂದೂ ಧರ್ಮದ ಶ್ರದ್ಧಾಸ್ಥಾನ ಭಗವಾನ್ ಶಿವ, ಕೃಷ್ಣ, ರಾಮ, ಗಣೇಶ ಮೊದಲಾದ ದೇವತೆಗಳು ಸ್ತ್ರೀಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವಂತೆ, ಓಡಿಸುತ್ತಿರುವಂತೆ, ಕುಸ್ತಿ ಆಡುತ್ತಿರುವಂತೆ ಹೀಗೆ ವಿವಿಧ ರೀತಿಯಲ್ಲಿ ಚಿತ್ರಿಸಲಾಗಿದೆ. ಈ ಪೋಸ್ಟ್ ಗಳಿಗೆ ಅನೇಕ ಮತಾಂಧರು ಧಾರ್ಮಿಕ ಭಾವನೆಗಳನ್ನು ನೋಯಿಸುವಂತೆ ಕಮೆಂಟ್ ಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಹಿಂದೂಗಳನ್ನು ಕೆರಳಿಸುವ ಬಹುದೊಡ್ಡ ಷಡ್ಯಂತ್ರ ಇದರಲ್ಲಿ ಅಡಗಿದೆ. ಫ್ಯಾಕ್ಟ್ ವಿಡ್ ಪೇಜ್‌ನಲ್ಲಿ ಎಐ ಬಳಸಿ ಹಿಂದೂ ದೇವತೆಗಳಿಗೆ ಅಪಮಾನಕ್ಕೆ ಹಿಂದೂ ಸಂಘಟನೆಗಳಿಂದ ಆಕ್ರೋಷ ವ್ಯಕ್ತವಾಗಿದೆ.

*ಮಂಗಳೂರಿನಲ್ಲಿ ಎಫ್‌ಐಆರ್

ಫ್ಯಾಕ್ಟ್ ವಿಡ್ ಹೆಸರಿನ ಫೇಸ್ಬುಕ್ ಪೇಜ್ ಮಂಗಳೂರು ಲೊಕೇಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಬಗ್ಗೆ ವಕೀಲ ತೀರ್ಥೇಶ್ ಇವರು, ಫೇಸ್ಬುಕ್ ಪೇಜ್ ಫ್ಯಾಕ್ಟ್ ವಿಡ್‌ನ್ನು ನಿಯಂತ್ರಿಸುತ್ತಿರುವ ಅಡ್ಮಿನ್ ಮತ್ತು ಆ ಪೇಜ್‌ನಲ್ಲಿ ಹಿಂದೂ ದೇವತೆಗಳ ಅವಹೇಳನ ಮಾಡುವ ಕಮೆಂಟ್‌ಗಳನ್ನೂ ಹಾಕುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 299, 192, 353 ಮತ್ತು 67 ಐಟಿ ಆ್ಯಕ್ಟ್ ಸೆಕ್ಷನ್ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು, ಧಾರ್ಮಿಕ ಭಾವನೆಗೆ ನೋವುಂಟು ಮಾಡಲು ಎಡೆಮಾಡಿಕೊಡುವ ಎಐ ಟೂಲ್‌ಗಳನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಮಂಗಳೂರಿನ ಸೈಬರ್ ಕ್ರೈಮ್ ವಿಭಾಗಕ್ಕೆ ನ್ಯಾಯವಾದಿಗಳ ಒಕ್ಕೂಟ ಹಾಗೂ ಹಿಂದೂ ಜನಜಾೃತಿ ಸಮಿತಿಯಿಂದ ದೂರು ನೀಡಿದ್ದು, ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

-------------------

ಫ್ಯಾಕ್ಟ್ ವಿಡ್ ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ

ಈ ಎಐ ಆಧಾರಿತ ಚಿತ್ರಗಳಿಂದ ಕೋಟ್ಯಂತರ ಹಿಂದೂ ಬಾಂಧವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಹಿಂದೂ ದೇವತೆಗಳ ಅಪಮಾನಾತ್ಮಕ ಮತ್ತು ಅಶ್ಲೀಲ ಫೋಟೋಗಳನ್ನು ನಿರಂತರವಾಗಿ ಫೇಸ್ಬುಕ್ ಜಾಲತಾಣದ ಮುಖಾಂತರ ಪ್ರಸಾರ ಮಾಡಲಾಗುತ್ತಿದೆ. ಸಂಬಂಧಿತ ಸೈಬರ್ ಕ್ರೈಮ್ ವಿಭಾಗವು ಇದರ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು ಫ್ಯಾಕ್ಟ್ ವಿಡ್ ಪೇಜ್‌ನ ಅಡ್ಮಿನ್ ಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು.

ವಿಜಯ ಕುಮಾರ, ಜಿಲ್ಲಾ ಸಮನ್ವಯಕ

ಹಿಂದೂ ಜನಜಾಗೃತಿ ಸಮಿತಿ ದ.ಕ

-------------------

ಹಿಂದೂ ದೇವತೆಗಳ ಅಪಮಾನಾತ್ಮಕ ಮತ್ತು ಅಶ್ಲೀಲ ಫೋಟೋಗಳನ್ನು ನಿರಂತರವಾಗಿ ಫೇಸ್ಬುಕ್ ಜಾಲತಾಣದ ಮುಖಾಂತರ ಪ್ರಸಾರ ಮಾಡಲಾಗುತ್ತಿದೆ ಎಂದು ದೂರು ಬಂದಿದೆ. ದೂರನ್ನು ಸ್ವೀಕರಿಸಿ ತಾವೆಲ್ಲರೂ ಸಮಾಜದ ಕಾಳಜಿ ವಹಿಸಿ ಇದನ್ನು ಜವಾಬ್ದಾರಿಯಿಂದ ವಿರೋಧಿಸುತ್ತಿರುವುದು ಅಭಿನಂದನಾರ್ಹವಾಗಿದೆ. ಇದರ ಬಗ್ಗೆ ಕೂಡಲೇ ಕ್ರಮಕೈಗೊಳ್ಳುತ್ತೇವೆ.

ಭಾರತಿ, ಪೊಲೀಸ್ ನಿರೀಕ್ಷಕಿ

ಮಂಗಳೂರು ಉರ್ವ ಪೊಲೀಸ್ ಠಾಣೆ