ಮಡಿಕೇರಿ:
ಕೊಡವ ಸಾಂಪ್ರದಾಯಿಕ ಉಡುಗೆ ತೊಡುಗೆ, ಆಭರಣಗಳು ಸೇರಿದಂತೆ ಕೊಡವ ಸಂಸ್ಕೃತಿಯ ದುರ್ಬಳಕೆ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಇಂಥ ವಿದ್ಯಮಾನ ಕಂಡುಬAದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಕೊಡವ ಸಂಘಟನೆಗಳು ನಿರ್ಣಯ ತೆಗೆದುಕೊಂಡಿವೆ. ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ ಕೊಡವ ಸಮಾಜಗಳು ಸೇರಿದಂತೆ ವಿವಿಧ ಕೊಡವ ಸಂಘಟನೆಗಳ ಪ್ರಮುಖರು ಭಾಗಿಯಾಗಿ ಈ ಮಹತ್ವದ ನಿರ್ಣಯ ತೆಗೆದುಕೊಳ್ಳುವುದರ ಜತೆಗೆ ಇತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆ ತೊಡುಗೆ ಹಾಗೂ ಸಾಂಪ್ರದಾಯಿಕ ಆಭರಣಗಳು ಸೇರಿದಂತೆ ಕೊಡವ ಸಂಸ್ಕೃತಿಯ ದುರ್ಬಳಕೆಯಾಗುತ್ತಿದ್ದು ಕೊಡವೇತರರು ಕೂಡ ಇದರ ದುರ್ಬಳಕೆ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಇತ್ತೀಚೆಗೆ ಬೆಂಗಳೂರಿನ ರೆಸಾರ್ಟ್ವೊಂದರಲ್ಲಿ ನಡೆದ ಮುಸ್ಲಿಂ ಜನಾಂಗದ ವ್ಯಕ್ತಿಯೊಬ್ಬರ ಮದುವೆಯಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆ ತೊಡುಗೆ ಸೇರಿದಂತೆ ಕೊಡವ ಸಂಸ್ಕೃತಿಯ ದುರ್ಬಳಕೆ ಆಗಿದ್ದನ್ನು ಖಂಡಿಸಲಾಯಿತು.
ಇತ್ತೀಚೆಗೆ ಕೊಡವ ಸಂಸ್ಕೃತಿ ಸಾಂಪ್ರದಾಯ ಹೈಜಾಕ್ ಆಗುತ್ತಿದ್ದು, ಆಯಾಯ ಜನಾಂಗಕ್ಕೆ ಅವರವರ ಪದ್ದತಿ ಸಂಸ್ಕೃತಿ ಶೋಭೆ ಹೊರತೂ ಅನ್ಯ ಸಂಸ್ಕೃತಿ ಶೊಭೆ ತರುವುದಿಲ್ಲ. ಇದು ಘರ್ಷಣೆಗೆ ಎಡೆ ಮಾಡಿಕೊಡುತ್ತದೆ ಇದಕ್ಕೆ ಅವಕಾಶ ನೀಡದೆ ಅವರವರ ಪದ್ಧತಿ, ಸಂಸ್ಕೃತಿ ಆಚರಿಸಿಕೊಂಡು ಹೋದರೆ ನಮಗೂ ಕೂಡ ಅವರ ಸಂಸ್ಕೃತಿ ಬಗ್ಗೆ ತಿಳಿದುಕೊಂಡAತೆ ಆಗುತ್ತದೆ. ಕೊಡವರಲ್ಲದವರು ಹಾಗೂ ಕೊಡವ ಸಂಸ್ಕೃತಿ, ಆಚಾರ ವಿಚಾರ ಹೊಂದಿರದ ಜನಾಂಗ ಕೊಡವ ಸಂಸ್ಕೃತಿಯನ್ನು ದುರ್ಬಳಕೆ ಮಾಡುತ್ತಿರುವುದು ವಿಷಾದನೀಯ ಎಂಬ ಮಾತು ಸಭೆಯಲ್ಲಿ ಕೇಳಿಬಂತು.
ಕೊಡವರು ಕೊಡವರಲ್ಲದವರನ್ನು ಮದುವೆಯಾಗುವುದನ್ನು ನಿಲ್ಲಿಸಬೇಕು, ಒಂದು ವೇಳೆ ಮದುವೆಯಾದರೆ ಕೊಡವಾಮೆ ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಹೊರಗಿನಿಂದ ಬರುವ ಕೊಡವರಲ್ಲದ ರಾಜಕೀಯ ವ್ಯಕ್ತಿಗಳಿಗೆ ಕೊಡವ ಉಡುಪನ್ನು ತೊಡಿಸಿ ನಮ್ಮ ಒಡಿಕತ್ತಿ ಪೀಚೆ ಕತ್ತಿ ಸೇರಿದಂತೆ ನಮ್ಮ ಸಾಂಪ್ರದಾಯಿಕ ಉಡುಗೆ ಅಥವಾ ಆಭರಣಗಳನ್ನು ನೀಡುವುದನ್ನು ಕೂಡ ನಿಲ್ಲಿಸಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಕೊಡವರು ಪರರಿಗೆ ಆಸ್ತಿ ಮಾರಾಟ ಮಾಡದಂತೆ ಹಾಗೂ ಅನಿವಾರ್ಯವಾದರೆ ಕೊಡವರಿಗೆ ನೀಡುವಂತೆ ಸಭೆಯಲ್ಲಿ ಚರ್ಚಿಸಲಾಯಿತು. ಕೊಡವರ ಆಸ್ತಿ ಉಳಿದರೆ ಮಾತ್ರ ಕೊಡವಾಮೆ ಕೊಡವ ಸಂಸ್ಕೃತಿ ಉಳಿಯಲು ಸಾಧ್ಯ ಎಂಬ ಮಾತು ಕೇಳಿಬಂತು.
ವಿರಾಜಪೇಟೆ ಕಾವೇರಿ ಆಶ್ರಮದ ವಿಷಯವಾಗಿ ಸುದೀರ್ಘ ಚರ್ಚೆ ನಡೆದು ಕೊಡವ ಜನಾಂಗದ ಹೆಮ್ಮೆಯ ಆಸ್ತಿಯಾಗಿರುವ ಕಾವೇರಿ ಆಶ್ರಮ ಯಾವುದೇ ಕಾರಣಕ್ಕೂ ಪರರ ಪಾಲಾಗದಂತೆ ಹಾಗೂ ಇದಕ್ಕೆ ಪೂರಕವಾದ ಹೋರಾಟಕ್ಕೆ ವಿವಿಧ ಕೊಡವ ಸಮಾಜಗಳು ಅಖಿಲ ಕೊಡವ ಸಮಾಜದೊಂದಿಗೆ ಕೈಜೊಡಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.
ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಖಜಾಂಚಿ ಮಂಡೇಪAಡ ಸುಗುಣ ಮುತ್ತಣ, ಕಾರ್ಯದರ್ಶಿ ಕೀತಿಯಂಡ ವಿಜಯ್, ಸಹ ಕಾರ್ಯದರ್ಶಿ ಮೂವೇರ ರೇಖಾ ಪ್ರಕಾಶ್, ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ, ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಸೇರಿದಂತೆ ವಿವಿಧ ಕೊಡವ ಸಮಾಜಗಳ ಹಾಗೂ ಕೊಡವ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
ಭಾಗವಹಿಸಿದ್ದ ಪ್ರಮುಖರು:
ಪ್ರಮುಖರಾದ ಕೊಲ್ಲೀರ ಉಮೇಶ್, ವಿರಾಜಪೇಟೆ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಕೊಡವಾಮೆ ಕೊಂಡಾಟ ಅಧ್ಯಕ್ಷ ಚಾಮೇರ ದಿನೇಶ್ ಬೆಳ್ಳಿಯಪ್ಪ, ವಿರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ಕುಂಬೇರ ಮನು ಕುಮಾರ್, ಕಾರ್ಯದರ್ಶಿ ಮಾಳೇಟೀರ ಶ್ರೀನಿವಾಸ್, ಅಮ್ಮತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್, ಪ್ರಮುಖರಾದ ಚೀರಂಡ ಕಂದಾ ಸುಬ್ಬಯ್ಯ, ಕೊಡಗು ಏಕೀಕರಣ ರಂಗದ ಪ್ರಮುಖರಾದ ತೇಲಪಂಡ ಸೋಮಯ್ಯ, ಪ್ರಮುಖರಾದ ಮಾಚಿಮಾಡ ರವೀಂದ್ರ, ಕರ್ನಲ್ ಚೆಪ್ಪುಡೀರ ಮುತ್ತಣ್ಣ, ಗರ್ವಾಲೆ ಕೊಡವ ಸಮಾಜದ ಅಧ್ಯಕ್ಷ ಶರ್ಕಂಡ ಸೋಮಯ್ಯ, ಪೊನ್ನಂಪೇಟೆ ಕೊಡವ ಸಮಾಜ ಉಪಾಧ್ಯಕ್ಷ ಚಿರಿಯಪಂಡ ಇಮ್ಮಿ ಉತ್ತಪ್ಪ, ಸದಸ್ಯೆ ಮೂಕಳೇರ ಕಾವ್ಯ ಮಧು ಕುಮಾರ್.