ಜಿಲ್ಲೆ

ಆಕ್ರೋಶದ ಅಭಿವ್ಯಕ್ತಿ ಬೈಗುಳ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮನುಷ್ಯನ ಆಕ್ರೋಶವನ್ನು ಬೈಗುಳದ ಮೂಲಕ ಅಭಿವ್ಯಕ್ತಿಸುವುದರಿಂದ ಬದುಕಿನ ಸಮತೋಲನ ಸಾಧಿಸಿಕೊಳ್ಳಬಹುದು ಎಂದು ಕನ್ನಡ ಅಧ್ಯಾಪಕ ಡಾ. ಸಿ.ಪಿ. ನಾಗರಾಜು ಹೇಳಿದರು. ಅಲ್ಲಾರಂಡ ರಂಗಚಾವಡಿ ಮತ್ತು ಸಿರಿ ಕನ್ನಡ ವೇದಿಕೆ ಕೊಡಗು ಘಟಕದಿಂದ ೬೮ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಬೈಗುಳ ಸಾಹಿತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

ಲೋಕಾಭಿರಾಮವಾಗಿ ರಾಜಕಾರಣಿಗಳನ್ನು ಬೈಯ್ಯುವುದು ಸಾಮಾನ್ಯ. ಇದು ಅಸಹನೆ ಹೊರಹಾಕುವ ಒಂದು ಮಾರ್ಗ. ಮಾತೃ ಭಾಷೆಯ ಬೈಗುಳಗಳು ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹತಾಶೆ, ಅನ್ಯಾಯಕ್ಕೆ ಒಳಗಾದವರ ಬೈಗುಳ ತೀವ್ರವಾಗಿರುತ್ತದೆ. ಬೈಗುಳಗಳು ಸಾಮಾಜಿಕ ಕಳಂಕ, ಅನಿಷ್ಠವನ್ನು ಬಿಂಬಿಸುವ ಶಬ್ದಗಳನ್ನು ಹೊಂದಿರುತ್ತದೆ. ಬೈಗುಳಕ್ಕೂ, ಎಚ್ಚರಿಕೆ ಕೊಡುವ ಧ್ವನಿಗೂ ವ್ಯತ್ಯಾಸ ಇದೆ. ದುಡಿಮೆಗೆ ತಕ್ಕ ಪ್ರತಿಫಲ ಪಡೆಯದ ಸಮುದಾಯದಲ್ಲಿ ಬೈಗುಳದ ಬಳಕೆ ಹೆಚ್ಚು. ಶಾಪದಿಂದ ಹಾನಿ ಆಗುತ್ತದೆ ಎನ್ನುವುದು ಬರೀ ನಂಬಿಕೆ ಅಷ್ಟೇ. ಬೈಗುಳಗಳ ಮೂಲಕ ಜನಪದ ಭಾಷೆ ಇಡೀ ಸಮುದಾಯದ ಎಲ್ಲಾ ನಡಾವಳಿಗಳನ್ನು ದಾಖಲು ಮಾಡುತ್ತದೆ ಎಂದರು.

‘ಬೈಗುಳ ಬರಹ'À ಪುಸ್ತಕ ಬಿಡುಗಡೆ ಮಾಡಿದ ಸಾಹಿತಿ ಸುನಿತಾ ಕುಶಾಲನಗರ ಮಾತನಾಡಿ, ಸದಾ ಹಿತ ಕೊಡುವುದೇ ಸಾಹಿತ್ಯ ಎಂದು ನಂಬಿರುವಲ್ಲಿ ಬೈಗುಳವೂ ಸಾಹಿತ್ಯ ಆಗುತ್ತದಾ ಎನ್ನುವುದು ಚಿಂತಿಸುವAತೆ ಮಾಡುತ್ತದೆ. ಮನೆಯಲ್ಲಿ ಮಕ್ಕಳನ್ನು ನಿಭಾಯಿಸುವುದಕ್ಕಿಂತ, ಶಾಲೆಯಲ್ಲಿ ಮಕ್ಕಳನ್ನು ಸಂಭಾಳಿಸುವುದು ಸುಲಭ. ಇಲ್ಲೂ ಬೈಗುಳಗಳ ಬಳಕೆ ಆಗುತ್ತದೆ ಎಂದರು.
ಕೊಡಗಿನ ಪ್ರಥಮ ಬೈಗುಳ ಸಾಹಿತಿ ಅಂಜಪರವAಡ ರಂಜು ಮುತ್ತಪ್ಪ, ಕೊಡವ ಭಾಷೆಯ ಗಾಯಕಿ, ರಾಗ ಸಂಯೋಜಕಿ ಕಬ್ಬಚ್ಚಿರ ರಶ್ಮಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.