ಬಾಳೆಹೊನ್ನೂರು: ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಸ್ವಾತಂತ್ರೊೃೀತ್ಸವ ಅಂಗವಾಗಿ ಕೊಪ್ಪ ರಸ್ತೆಯ ಎಂ.ಎಸ್.ಅರುಣೇಶ್ ಅವರ ಕೃಷಿ ಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಕ್ರೀಡಾ ವೈಭವ ಕೆಸರುಗದ್ದೆ ಆಟೋಟ ಸ್ಪರ್ಧೆಗಳು ಕ್ರೀಡಾಭಿಮಾನಿಗಳ ಮನರಂಜಿಸಿದವು.
ಗುರುವಾರ ಮಧ್ಯಾಹ್ನ ಕ್ರೀಡಾಕೂಟ ಆರಂಭಗೊಳ್ಳುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಜನ ಸ್ಪರ್ಧೆಗಳು ಮುಕ್ತಾಯಗೊಳ್ಳುವವರೆಗೂ ವೀಕ್ಷಿಸಿ ಆಟಗಾರರನ್ನು ಹುರಿದುಂಬಿಸಿದರು. ಕ್ರೀಡಾಸಕ್ತರ ಹರ್ಷೋದ್ಘಾರ, ಕೇಕೆ, ಸಿಳ್ಳೆ ಆಟಗಾರರನ್ನು ಮತ್ತಷ್ಟು ಪ್ರೇರೆಪಿಸಿದವು. ಹಗ್ಗಜಗ್ಗಾಟ ಹಾಗೂ ವಾಲಿಬಾಲ್, ಕ್ರಿಕೆಟ್ ಪಂದ್ಯಾವಳಿಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು.
ಸ್ಪರ್ಧಿಗಳು ಕೆಸರಿನಲ್ಲಿ ಮಿಂದೆದ್ದು, ಗೆಲುವಿಗಾಗಿ ಎದುರಾಳಿಗಳೊಂದಿಗೆ ಸೆಣಸಿದರು. ಯುವಕರು, ಮಕ್ಕಳೂ ಕೆಸರಿನ ಸ್ನಾನ ಮಾಡಿ ಸಂಭ್ರಮಿಸಿದರು.
ವಿಜೇತರು: ಹಗ್ಗಜಗ್ಗಾಟ-ಹೂವಿನಹಕ್ಲು ತಂಡ (ಪ್ರ), ಚೆಂಕಿ ಚಡಲ್ಸ್ (ದ್ವಿ), ವಾಲಿಬಾಲ್-ಸಂಗಮ್ ಫ್ರೆಂಡ್ಸ್ ಎ ತಂಡ ಉಜಿರೆ (ಪ್ರ), ಸಂಗಮ್ ಫ್ರೆಂಡ್ಸ್ ಬಿ ತಂಡ (ದ್ವಿ), ಕ್ರಿಕೆಟ್-ಎ.ಕೆ.ಸ್ಪೋರ್ಟ್ಸ್ (ಪ್ರ), ಯುನೈಟೆಡ್ ಭದ್ರಾ (ದ್ವಿ), ಕೆಸರುಗದ್ದೆ ಓಟ-ಮುರಳಿ ಪುತ್ತೂರು (ಪ್ರ), ಶರತ್ ಕಟ್ಟೇಮನೆ (ದ್ವಿ), ಸುಮಂತ್ (ತೃ) ಸ್ಥಾನ ಪಡೆದರು. ವಿಜೇತರಿಗೆ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಯಿತು.
ಜೇಸಿ ವಲಯಾಧ್ಯಕ್ಷೆ ಆಶಾ ಜೈನ್, ಅಧ್ಯಕ್ಷ ಎನ್.ಶಶಿಧರ್, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ, ಸದಸ್ಯ ಎಂ.ಎಸ್.ಅರುಣೇಶ್, ದಾನಿಗಳಾದ ಕೆ.ಕೆ.ವೆಂಕಟೇಶ್, ಸಂತೋಷ್ ಅರೆನೂರು, ಮೋಹನ್‌ದಾಸ್ ಹೆಗ್ಡೆ, ಪ್ರಸಾದ್ ಹೆಗ್ಡೆ, ಟಿ.ಎಂ.ಉಮೇಶ್ ಕಲ್ಮಕ್ಕಿ, ಹರೀಶ್ ಬಿಕ್ಕರಣೆ, ಎಚ್.ಎಸ್.ರವಿ, ಸುವಿಕ್ರಮ್, ಎ.ಕೆ.ಸಂದೇಶ್, ಆರ್ಧನ್, ಡಾ. ನವೀನ್ ಲಾಯ್ಡ ಮಿಸ್ಕಿತ್, ಬಿ.ಎಸ್.ಅಜಿತ್, ಎಚ್.ಟಿ.ಶೃಜಿತ್, ಪ್ರಕಾಶ್ ಮುದುಗುಣಿ, ಸಿ.ವಿ.ಸುನೀಲ್ ಇತರರಿದ್ದರು.