ಕುಶವಾರ ಗ್ರಾಮದ ಭದ್ರೇಗೌಡರ ಕಾಫಿ ತೋಟದಲ್ಲಿ ವಿದ್ಯುತ್ ತಂತಿ ತುಂಡಾಗಿದ್ದರಿಂದ ಬೆಳೆಗಳು ಸುಟ್ಟು ಭಸ್ಮವಾಗಿದೆ. 
ಜಿಲ್ಲೆ

ವಿದ್ಯುತ್ ತಂತಿ ತುಂಡಾಗಿ ತೋಟಕ್ಕೆ ಬೆಂಕಿ

ಬೇಲೂರು: ತಾಲೂಕಿನ ಕುಶಾವರ ಗ್ರಾಮದಲ್ಲಿ ಮಂಗಳವಾರ ವಿದ್ಯುತ್ ತಂತಿ ತುಂಡಾಗಿ ತೋಟದೊಳಗೆ ಬಿದ್ದಿದ್ದರಿಂದ ಕಾಫಿ, ಮೆಣಸು, ಬಾಳೆ ಸೇರಿದಂತೆ ಇತರ ಬೆಳೆಗಳು ಸುಟ್ಟು ಹೋಗಿವೆ.

ತಾಲೂಕಿನ ಕುಶವಾರ ಗ್ರಾಮದ ಭದ್ರೇಗೌಡ ಅವರ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿದ್ದರಿಂದ ತೋಟದ ತುಂಬೆಲ್ಲ ಬೆಂಕಿ ಹರಡಿ ಬೆಳೆಗಳನ್ನೆಲ್ಲ ಸುಟ್ಟು ಹೋಗಿದೆ. ಇದರಿಂದ ಹತ್ತಾರು ವರ್ಷದಿಂದ ಕಷ್ಟಪಟ್ಟು ಬೆಳೆದಿದ್ದ ಗಿಡಗಳು ಕ್ಷಣಾರ್ಧದಲ್ಲಿ ನಾಶವಾಗಿದೆ.

ತೋಟದ ಮಾಲೀಕ ಭದ್ರೇಗೌಡ ಮಾತನಾಡಿ, 3 ಎಕರೆಗೂ ಹೆಚ್ಚು ಕಾಫಿ ತೋಟವನ್ನು ಕಷ್ಟ-ಪಟ್ಟು ಮಾಡಿದ್ದೆವು. ಇದರಲ್ಲಿ ಕಾಫಿಯೊಂದಿಗೆ ಮೆಣಸು, ಬಾಳೆ, ಇತರಬೆಳೆ ಬೆಳೆದಿದ್ದೆವು. ಈಗಾಗಲೇ ಕಾಡಾನೆಗಳ ಆತಂಕದಲ್ಲಿರುವ ಸಂದರ್ಭದಲ್ಲಿ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ತುಂಡಾಗಿ ಬೆಂಕಿ ಹೊತ್ತಿಕೊಂಡು ತೋಟವೇ ಸುಟ್ಟು ಹೋಗಿದೆ. ಈ ವಿಚಾರವಾಗಿ ಸೆಸ್ಕ್ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.
ಕಾಫಿ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಅದ್ದೂರಿ ಕುಮಾರ್, ಕುಶವಾರ ಗ್ರಾಮದ ಕೌಶಿಕ್. ಆದೇಶ್, ಬಸವರಾಜ, ಪಾಪಣ್ಣ ಇದ್ದರು.