ಧಾರವಾಡ: ನಗರದ ಸಪ್ತಾಪುರ ಲಾಸ್ಟ್ ಸ್ಟಾಪ್‌ನ ತುಂಗಭದ್ರಾ ಕಾಲನಿಯ 1ನೇ ಕ್ರಾಸ್‌ನಲ್ಲಿ ವಿದ್ಯುತ್ ಕಂಬಕ್ಕೆ ಗಿಡ ಬೆಳೆದು ಅಪಾಯಕ್ಕೆ ಆಹ್ವಾನಿಸುತ್ತಿದೆ. ಕಾಲನಿಯಲ್ಲಿ ಮಕ್ಕಳು ವಿದ್ಯುತ್ ಕಂಬಕ ಅಕ್ಕಪಕ್ಕ ಆಟವಾಡುತ್ತಾರೆ. ಮಕ್ಕಳು ತಿಳಿಯದೆ ಕಂಬ ಹಿಡಿದರೆ ವಿದ್ಯುತ್ ಪ್ರವಹಿಸಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಈ ಸಂಬ0ಧ ಡಿ. 2ರಂದು ಹೆಸ್ಕಾಂಗೆ ದೂರು ನೀಡಲಾಗಿದೆ. ಆದರೆ, ಈವರೆಗೆ ಗಿಡವನ್ನು ಕತ್ತರಿಸಿಲ್ಲ. ಅಪಾಹ ಸಂಭವಿಸುವ ಮೊದಲು ಹೆಸ್ಕಾಂ ಸಿಬ್ಬಂದಿ ಎಚ್ಚೆತ್ತುಕೊಳ್ಳಬೇಕು ಎಂದು ನಿವಾಸಿ ಮೃತ್ಯುಂಜಯ ಎಸ್. ಶಿವಳ್ಳಿ ಆಗ್ರಹಿಸಿದ್ದಾರೆ.