ಜಿಲ್ಲೆ

ಕಾರ್ ಮೇಲೆ ಬಿದ್ದ ವಿದ್ಯುತ್ ಕಂಬ

ಮಂಜುನಾಥ ಅಂಗಡಿ

ಧಾರವಾಡ: ಕಾರ್ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದ ಘಟನೆ ನಗರದ ದ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನ ಬಳಿ ಮಂಗಳವಾರ ಸಂಜೆ ನಡೆದಿದೆ. ಕಾರ್‌ನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿದ್ಯುತ್ ಕಂಬ ಏಕಾಏಕಿ ಬೀಳುತ್ತಿದ್ದಂತೆ ಅದರೊಂದಿಗೆ ರಸ್ತೆಬದಿಯ ಮರವೂ ಧರೆಗುರುಳಿದೆ. ವಿದ್ಯುತ್ ಕಂಬ ಬಿದ್ದಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.