ಜಿಲ್ಲೆ

ಮನೆಯಲ್ಲಿಯೇ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್ ತಪ್ಪಿದ ಭಾರೀ ಅನಾಹುತ

ಮಾಗಡಿ. ಮನೆಯಲ್ಲಿ ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ನಲ್ಲಿ ಬೆಂಕಿ ಹೊತ್ತಿ ಉರಿದಿದ ಘಟನೆ ಮಾಗಡಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಕಲ್ಯಾಗೇಟ್ ಜಡೆದೇವ ಮಠದ ರಸ್ತೆಯ ಲಕ್ಷ್ಮಿ ನರಸಿಂಹ ಎಂಬುವರು ಭಾನುವಾರ ಮುಂಜಾನೆ 4 ಗಂಟೆಗೆ ತಮ್ಮ ಎಲೆಕ್ಟ್ರಿಕ್ ಬೈಕ್ ಗೆ ಚಾರ್ಜ್ ಹಾಕಿ ಮಲ್ಲಗಿದ್ದಾರೆ.
ಚಾರ್ಜ್ ಹಾಕಿ ಒಂದು ಗಂಟೆಯ ನಂತರ ಸುಟ್ಟ ವಾಸನೆ ಬಂದಿದ್ದು, ಎದ್ದು ನೋಡುವಷ್ಟರಲ್ಲಿ ಬೆಂಕಿ ಕಾಣಿಸಿದೆ.

ಬೆಂಕಿಯನ್ನು ನಂದಿಸಲು ಸಾಕಷ್ಟು ಪ್ರಯತ್ನಿಸಿದರು ಸಾಧ್ಯವಾಗದ ವೇಳೆ ಸ್ಥಳಿಯರು ಬೈಕ್ ಮಾಲೀಕ ಉರಿಯುತ್ತಿದ್ದ ಬೈಕನ್ನು ಮನೆಯ ಹೊರಗೆ ಹಾಕಿ ನಂದಿಸಿದ್ದಾರೆ ಈ ವೇಳೆ ಬೈಕ್ ಮಾಲೀಕರ ಕೈ.ಕಾಲು, ಮುಖದ ಭಾಗಕ್ಕೆ ಬೆಂಕಿ ತಗುಲಿದೆ.

ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮನೆಯಲ್ಲಿದ್ದ ವಾಶಿಂಗ್ ಮಿಷನ್, ಯೂಪಿಎಸ್ ಸೇರಿದಂತೆ ಪಿಠೋಪಕರಣಗಳು ಸಂಪೂರ್ಣ ನಾಶವಾಗಿದೆ

ಎಚ್ಚೆತ್ತ ಸ್ಥಳಿಯರು ಕೂಡಲೇ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಇದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.
ಲಕ್ಷ್ಮಿನರಸಿಂಹ ಅವರು ಮನೆಯಲ್ಲಿ 2 ಮಗ್ಗ ಹಾಕಿಕೊಂಡು ಬಟ್ಟೆ ನೇಯ್ದು ಜೀವನ ನಡೆಸುತ್ತಿದ್ದು ಇತ್ತಿಚಿಗೆ ಬೈಕ್ ತೆಗೆದುಕೊಂಡಿದ್ದರು. ಬೈಕ್ ನಲ್ಲಿ ಬೆಂಕಿ ಹೊತ್ತು ಉರಿದು ಮನೆಯಲ್ಲಾ ಹಾನಿಯಾಗಿ ಲಕ್ಷಾಂತರ ರೂ ನಷ್ಟವಾಗಿದೆ.

ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.