ಜಿಲ್ಲೆ

ವೃದ್ಧ ದಂಪತಿಯನ್ನು ಮನೆಯಲ್ಲೇ ಕೂಡಿಹಾಕಿ ದರೋಡೆ! ಮೂವರು ಮುಸುಕುಧಾರಿಗಳಿಂದ ಕೃತ್ಯ

mahalakshmihm

ಕೊಡಗು: ವೃದ್ಧ ದಂಪತಿಯನ್ನು ಕೂಡಿಹಾಕಿ ಮನೆಯಲ್ಲಿ ದರೋಡೆ ಮಾಡಿರುವ ಘಟನೆ ವೀರಾಜಪೇಟೆ ತಾಲೂಕಿನ ಮಾಲ್ದಾರೆಯ ಬಾಡಗ ಗ್ರಾಮದಲ್ಲಿ ನಡೆದಿದೆ.

ತಂಗಪ್ಪ- ಜಾನಕ್ಕಿ ದಂಪತಿಯನ್ನು ಕೊಠಡಿಯಲ್ಲಿ ಕೂಡಿಹಾಕಿದ ದರೋಡೆಕೋರರು, ಎರಡು ಲಕ್ಷ ನಗದು,ಹತ್ತು ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಮೂವರು ಮುಸುಕುಧಾರಿಗಳು ಏಕಾಏಕಿ ಮನೆಗೆ ನುಗ್ಗಿ ವೃದ್ಧ ದಂಪತಿಯನ್ನು ಕೊಠಡಿಯೊಳಗೆ ಕೂಡಿಹಾಕಿದ್ದಾರೆ. ಬಳಿಕ ಕಳ್ಳತನ ಮಾಡಿ ಪರಾರಿಯಾಗಿದ್ದು, ಸದ್ಯ ಈ ಬಗ್ಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದರೋಡೆಕೋರರಿಗಾಗಿ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)