ಜಿಲ್ಲೆ

ಗಮನ ಸೆಳೆದ ನೃತ್ಯ ಪ್ರದರ್ಶನ

ಮಂಜುನಾಥ ತಿಮ್ಮಯ್ಯ

ಮೈಸೂರು: ವೃತ್ತಿಯಲ್ಲಿ ವೈದ್ಯೆಯಾಗಿರುವ ವಿದುಷಿ ಡಾ.ಅಗ್ನಿಕಾ ಅಜಯ್‌ಕುಮಾರ್ ಅವರು ಅರ್ಧನಾರೀಶ್ವರಂನ ವಿಶಿಷ್ಟ ಪರಿಕಲ್ಪನೆಯ ಮೂಲಕ ನೃತ್ಯ ಸಮರ್ಪಣೆ (ನೃತ್ಯ ಪ್ರದರ್ಶನ) ಮಾಡಿದರು.


ನಿಮಿಷಾಂಬ ನೃತ್ಯ ಕಲೆ ಸಂಸ್ಥೆ ವತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶಿಸಿದರು.


ಅರ್ಧನಾರೀಶ್ವರನ ನಾಟ್ಯದಲ್ಲಿ ಮುಖದ ಬಲಭಾಗವು ಶಿವನನ್ನು, ಎಡ ಭಾಗವು ಪಾರ್ವತಿಯನ್ನು ನಾಟ್ಯದಲ್ಲಿ ನಿರೂಪಿಸಿದರು. ಇವರ ನೃತ್ಯಕ್ಕೆ ಪ್ರೇಕ್ಷಕರು ನಿಬ್ಬೆರಾಗದರು. ನೃತ್ಯದಲ್ಲಿ ತಲ್ಲೀನರಾಗಿ ನೆರೆದ ಪ್ರೇಕ್ಷಕರಿಗೆ ಭಕ್ತಿ ಭಾವವನ್ನೂ ತುಂಬಿದರು.


ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕಾರ್ಯಕ್ರಮ ಉದ್ಘಾಟಿಸಿದರು. ಪಿಟೀಲು ವಾದಕ ಮೈಸೂರು ನಾಗರಾಜ್, ಭರತನಾಟ್ಯ ನೃತ್ಯಗಾರ್ತಿ ವಿದುಷಿ ಅನುರಾಧಾ ಶ್ರೀಧರ್, ಶ್ರೀ ನಿಮಿಷಾಂಭ ಸ್ಕೂಲ್ ಆಫ್ ಡಾನ್ಸ್‌ನ ಡಾ.ಅಜಯಕುಮಾರ್, ಭಾಗ್ಯ ಅಜಯ್ ಕುಮಾರ್, ಪ್ರಕಾಶ್, ಸಿಎಫ್‌ಟಿಆರ್‌ಐ ಮಾಜಿ ನಿರ್ದೇಶಕ ಹಾಗೂ ಅಗ್ನಿಕಾ ಅವರು ಗುರುಗಳಾದ ವಿದ್ವಾನ್ ಶ್ರೀಧರ್ ಜೈನ್ ಹಾಜರಿದ್ದರು.