ಮಡಿಕೇರಿ:
ಅರಣ್ಯ ಭೂಮಿ ಒತ್ತುವರಿ ತೆರವು, ಸಿ ಮತ್ತು ಡಿ ಜಾಗ ವಿವಾದಕ್ಕೆ ಸಂಬAಧಿಸಿದAತೆ ತಮ್ಮ ನೇತೃತ್ವದಲ್ಲಿ ಸರ್ವಪಕ್ಷಗಳು ಮತ್ತು ಸಂಘ-ಸAಸ್ಥೆಗಳ ಮುಖಂಡರನ್ನು ಒಳಗೊಂಡ ನಿಯೋಗದೊಂದಿಗೆ ಸದ್ಯದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಜಿಲ್ಲೆಯ ಇಬ್ಬರು ಶಾಸಕರು ಭರವಸೆ ನೀಡಿದರು. ಕೊಡಗು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆಧರಿಸಿ ಈ ಭರವಸೆ ನೀಡಿದರು.
ಕಸ್ತೂರಿರಂಗನ್ ವರದಿ ಜಾರಿ ಸಂಬAಧ ಚರ್ಚಿಸಲು ಸೆ.19ಕ್ಕೆ ಅರಣ್ಯ ಸಚಿವರು ಬೆಂಗಳೂರಿನಲ್ಲಿ ಸಭೆ ಕರೆದಿದ್ದು, ಇಲ್ಲಿ ಜಿಲ್ಲೆಯ ಜನತೆಯಲ್ಲಿರುವ ಆತಂಕಗಳನ್ನು ಮನವರಿಕೆ ಮಾಡಿಕೊಡಲು ಕೂಡಲೇ ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ಸಭೆ ಕರೆಯುವಂತೆಯೂ ಸಂವಾದದಲ್ಲಿ ಒತ್ತಾಯ ಕೇಳಿಬಂತು.
1972ರಲ್ಲಿ ಜಾರಿಯಾದ ಅರಣ್ಯ ಕಾನೂನು ಪ್ರಕಾರ ಅರಣ್ಯ ಉತ್ಪನ್ನಗಳನ್ನು ಇಟ್ಟುಕೊಳ್ಳುವುದು ಅಪರಾಧ. ಇದು ಕೇಂದ್ರ ಸರ್ಕಾರದ ಕಾನೂನಾಗಿದ್ದು, ಜನಸಾಮಾನ್ಯರು ತಮ್ಮಲ್ಲಿರುವ ಅರಣ್ಯ ಉತ್ಪನ್ನಗಳ ಘೋಷಣೆ ಮಾಡಿಕೊಂಡು ಅಧಿಕೃತಗೊಳಿಸಲು ಕೇಂದ್ರ ಸರ್ಕಾರವೇ ಮತ್ತೊಮ್ಮೆ ಅವಕಾಶ ಕೊಡಬೇಕಿದೆ. ಈ ಸಂಬAಧ ಸಂಸದರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಅಗತ್ಯವಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾದವು.
ಅರಣ್ಯ ಇಲಾಖೆಯ ಸೆಕ್ಷನ್ 4 ಅಧಿಸೂಚನೆ, ಸಿ ಮತ್ತು ಡಿ ಭೂಮಿಗೆ ಸಂಬAಧಿಸಿದAತೆ ನಡೆತಯುತ್ತಿರುವ ಬೆಳವಣಿಗೆಗಳ ಬಗ್ಗೆ ಬೆಳೆಗಾರರು ಆತಂಕದ ಮಾತುಗಳನ್ನಾಡಿದರು. ಕೆಲವೊಂದು ಪ್ರಕರಣಗಳಲ್ಲಿ ಸಂಪೂರ್ಣ ಗ್ರಾಮಗಳನ್ನೇ ಸೆಕ್ಷನ್ 4ರ ಅಧಿಸೂಚನೆಯಲ್ಲಿ ಸೂಚಿಸಲಾಗಿದೆ. ಸಿ ಮತ್ತು ಡಿ ಭೂಮಿಗಳಲ್ಲಿ ಮನೆ ಕಟ್ಟಿಕೊಂಡಿರುವ, ಕೃಷಿ ಮಾಡಿರುವ ಚಿಕ್ಕ ಹಿಡುವಳಿದಾರರು ಬೀದಿಪಾಲಾಗುವ ಭೀತಿಯಲ್ಲಿದ್ದಾರೆ. ಜಿಲ್ಲೆಯ ಶಾಸಕರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕಿದೆ ಎನ್ನುವ ಒತ್ತಾಯಗಳು ಕೇಳಿಬಂದವು.
ಕೊಡಗಿನಲ್ಲಿ ಆನೆ ಸಮಸ್ಯೆ ದಶಕಗಳಿಂದಲೂ ಇದೆ. ಕಂದಕ ನಿರ್ಮಾಣ, ರೈಲ್ವೇ ಬ್ಯಾರಿಕೇಡ್ ನಿರ್ಮಾಣ ಪೂರ್ಣ ಆಗಬೇಕು. ಆನೆ ಹಿಡಿಯಲು ಪರಿಸರವಾದಿಗಳ ವಿರೋಧ ಇದೆ. ಕಾಡಿಗೆಬಿಟ್ಟರೆ ವಾಪಸ್ ಬರುತ್ತದೆ. ಹೊಸ ತಂತ್ರಜ್ಞಾನ ಕಂಡುಹಿಡಿಯಬೇಕು ಎನ್ನುವ ಸಲಹೆಗಳು ಕೇಳಿಬಂದವು.
ಕೊಡಗು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಪ್ರಧಾನ ಕಾರ್ಯದರ್ಶಿ ಅನುಕಾರ್ಯಪ್ಪ, ಖಜಾಂಚಿ ಆನಂದ್ ಕೊಡಗು ಮತ್ತಿತರರು ಇದ್ದರು.
ಸೆಕ್ಷನ್ 4ರ ಅಧಿಸೂಚನೆಗೂ ಮೊದಲೇ ಅರಣ್ಯ ಪ್ರದೇಶ ಒತ್ತುವರಿ ಆಗಿದ್ದರೆ 3 ಎಕರೆ ತನಕದ ಒತ್ತುವರಿ ರಕ್ಷಣೆ ಮಾಡಬಹುದು. ಸಂಬAಧಿಸಿದ ಅಧಿಕಾರಿ ಮುಂದೆ ರೈತರು ತಮ್ಮ ಹಕ್ಕು ಪ್ರತಿಪಾದಿಸಬೇಕಿದೆ. ಸಿ ಮತ್ತು ಡಿ ಭೂಮಿ ಪ್ರಕರಣ ಕೋರ್ಟ್ನಲ್ಲಿದ್ದು, ಅಲ್ಲಿಯ ತೀರ್ಮಾನದ ನಂತರ ಸಮಸ್ಯೆ ಬಗೆಹರಿಸಬಹುದು. ಘೋಷಿತ ಅರಣ್ಯ ಪ್ರದೇಶದ ಒತ್ತುವರಿ ಬಿಡಲೇಬೇಕು. ಖಾಸಗಿ ಜಮೀನಿನಲ್ಲಿ ಮರಗಳ ಗಣತಿ ಸರಿಯಲ್ಲ. ಇದನ್ನು ತಡೆಯಲಾಗಿದೆ.
ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ
ಸಿ ಮತ್ತು ಡಿ ಲ್ಯಾಂಡ್ ವಿಷಯಕ್ಕೆ ಸಂಬAಧಿಸಿದAತೆ ಅರಣ್ಯ ಸಚಿವರನ್ನು ಭೇಟಿ ಮಾಡಲಾಗಿತ್ತು. ಸೆಕ್ಷನ್ 4ರ ನೊಟೀಫಿಕೇಶನ್ ವಿಷಯದಲ್ಲಿ ಜಂಟಿ ಸರ್ವೇ ಆಗಬೇಕು. ಹಸಿರೀಕರಣಕ್ಕೆ ರೈತರ ಕೊಡುಗೆಯೂ ಇದೆ. ರಾಜಕೀಯ ಕಿತ್ತಾಟದಲ್ಲಿ ರೈತರಿಗೆ ಅನ್ಯಾಯ ಆಗಬಾರದು. ಮುಖ್ಯಮಂತ್ರಿ ಹತ್ತಿರ ತೆರಳಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಕಾನೂನು ರೀತಿಯಲ್ಲಿ ಹೋರಾಟ ಮಾಡುವ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಬೇಕು.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
ಅರಣ್ಯಭೂಮಿ, ದೇವರಕಾಡು ವಿಷಯದ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸಿ ಮತ್ತು ಡಿ ಭೂಮಿ ನಿಯಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ವನ್ಯ ಪ್ರಾಣಿಗಳ ಉತ್ಪನ್ನ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸುವ ಕೆಲಸ ಆಗಬೇಕು. ಜನರಿಗೆ ಮಾರಕವಾದ ಕಾನೂನು ಪರಿಹರಿಸುವ ಕೆಲಸ ಜನಪ್ರತಿನಿಧಿಗಳು ಮಾಡಬೇಕು. ಆನೆ ಹಾವಳಿ ತಡೆಗೆ ಮುಂದಿನ ಬಜೆಟ್‌ನಲ್ಲಿ 500 ಕೋಟಿ ರೂ. ಇಡುವಂತಾಗಬೇಕು.
ಸುಜಾ ಕುಶಾಲಪ್ಪ, ವಿಧಾನ ಪರಿಷತ್ತು ಸದಸ್ಯ
ಸಿ ಮತ್ತು ಡಿ ಬಗ್ಗೆ ಗೊಂದಲ ಇದೆ. ಸಣ್ಣ ಹಿಡುವಳಿದಾರರು ಆತಂಕದಲ್ಲಿ ಇದ್ದಾರೆ. ಇದನ್ನು ಜನಪ್ರತಿನಿಧಿಗಳು ಬಗಹರಿಸಬೇಕು. ಕಸ್ತೂರಿ ರಂಗನ್ ವರದಿ ವಿರುದ್ಧ ಹೋರಾಟ ನಡೆಸಿಕೊಂಡು ಬರಲಾಗಿದೆ. ಈ ಸಂಬAಧ 6ನೇ ನೊಟೀಫಿಕೇಷನ್ ಬಂದಿದೆ. ಇದಕ್ಕೆ ಪ್ರತಿರೋಧ ತೋರಿಸಬೇಕು. ಸಾಂಸ್ಕೃತಿಕ ಉಪಯೋಗದ ಭೂಮಿಗೆ ಕಸ್ತೂರಿರಂಗನ್ ವರದಿ ಅನ್ವಯ ಆಗಬಾರದು. ಬಫರ್ ಝೋನ್ 0 ಮೀಟರ್‌ಗೆ ತಂದಿಡಬೇಕು.
ಧರ್ಮಜ ಉತ್ತಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಕೊಡಗಿನವರು ಪರಿಸರದ ವಿರೋಧಿಗಳಲ್ಲ. ಸರ್ಕಾರ ನಿಗದಿಪಡಿಸಿದಕ್ಕಿಂತ ಹೆಚ್ಚು ಮೀಸಲು ಅರಣ್ಯ ಕೊಡಗಿನಲ್ಲಿದೆ. ಸಿ ಮತ್ತು ಡಿ ಭೂಮಿಯಲ್ಲಿ ಮನೆ, ಸಣ್ಣ ಪ್ರಮಾಣದ ಕೃಷಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಆದೇಶ ಇದ್ದು, ಇದರ ಪಾಲನೆ ಆಗಬೇಕು. ತೇಗದ ಮರ ನೆಟ್ಟು ವನ್ಯ ಪ್ರಾಣಿಗೆ ಆಹಾರ ಇಲ್ಲದಂತೆ ಮಾಡಲಾಗಿದೆ. ಖಾಸಗಿ ಜಾಗದಲ್ಲಿ ಮರಗಳ ಗಣತಿಗೆ ವಿರೋಧವಿದೆ.
ನಾಪಂಡ ರವಿ ಕಾಳಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ
1900ರಲ್ಲಿ ಜಿಲ್ಲೆಯಲ್ಲಿ 16 ಸಾವಿರ ಎಕರೆ ದೇವರ ಕಾಡು ಇತ್ತು. ಆದರೆ ಈಗ ದೇವರ ಕಾಡು ಕೂಡ ಅತಿಕ್ರಮಣ ಆಗಿದೆ. ಸುಮಾರು 11 ಸಾವಿರ ಎಕರೆ ದೇವರಕಾಡು ಅತಿಕ್ರಮಿಸಲಾಗಿದೆ. ಶೇ.20ರಷ್ಟು ಕೊಡಗಿನ ಕಾಡು ನಾಶವಾಗಿದೆ. ಈಗ ಇರುವ ಕಾಡು ಉಳಿಸುವ ಅಗತ್ಯವಿದೆ. ಅತಿಕ್ರಮಣ ತೆರವು ಮಾಡಬೇಕು. ಇರುವ ಅರಣ್ಯ ಉಳಿಸಬೇಕು.
ತಮ್ಮು ಪೂವಯ್ಯ, ಮುಖ್ಯಸ್ಥ, ಕೊಡಗು ಏಕೀಕರಣ ರಂಗ
ದೊಡ್ಡ ಪ್ರಮಾಣದಲ್ಲಿ ನಡೆದಿರುವ ಅರಣ್ಯ ಒತ್ತುವರಿ ಮೊದಲು ತೆರವು ಮಾಡಲಿ. ಸರ್ಕಾರದ ನಿರ್ಧಾರಗಳಿಂದ ಸಣ್ಣ ರೈತರ ಬದುಕು ಏನಾಗುತ್ತದೆ ಎನ್ನುವ ಆತಂಕ ಇದೆ. ಇದನ್ನು ಬಗೆಹರಿಸಲು ಶಾಸಕರು, ಸಂಸದರು ಈ ಬಗ್ಗೆ ಗಮನಹರಿಸಬೇಕು. ಅರಣ್ಯ ಉತ್ಪನ್ನ ಘೋಷಣೆಗೆ ಗಡುವು ಕೊಡಬೇಕು. ಅರಣ್ಯ ಮಂತ್ರಿ ದಿನಕ್ಕೆ ಒಂದು ಹೇಳಿಕೆ ಕೊಡುತ್ತಾರೆ. ಸಣ್ಣ ಬೆಳೆಗಾರರ ಒತ್ತುವರಿ ತೆರವು ಮಾಡಿದರೆ ರೈತ ಸಂಘದಿAದ ಹೋರಾಟ ನಡೆಸಲಾಗುವುದು.
ಮನುಸೋಮಯ್ಯ, ರೈತ ಸಂಘದ ಪ್ರಮುಖರು
1994ರಲ್ಲಿ ರೈತರು ಬೆಳೆ ಬೆಳೆಯದ ಜಾಗ ಗುರುತಿಸಲು ಸರ್ಕಾರ ಆದೇಶ ಮಾಡಿತ್ತು. ಆದರೆ ಆಗಿದ್ದ ಅಧಿಕಾರಿಗಳು ಪೈಸಾರಿ ಜಾಗಗಳನ್ನೆಲ್ಲಾ ಸಿ ಮತ್ತು ಡಿ ಜಾಗ ಎಂದು ಸುಳ್ಳು ವರದಿ ಕೊಟ್ಟಿದ್ದಾರೆ. ಸಣ್ಣ ರೈತರಿಗೆ 3 ಎಕರೆ ಜಾಗ ಕೊಡಲಾಗುವುದು ಎಂದು ಸರ್ಕಾರ ಸುಳ್ಳು ಹೇಳುತ್ತಿದೆ. ಹಾರಂಗಿ, ಹೇಮಾವತಿ ಮುಳುಗಡೆ ಪ್ರದೇಶದ ರೈತರಿಗೆ ಇನ್ನೂ ಜಾಗ ಸಿಗಲಿಲ್ಲ. ಸಿ ಮತ್ತು ಡಿ ಜಾಗಕ್ಕೆ ಸಂಬAಧಿಸಿದAತೆ ಜಂಟಿ ಸರ್ವೆ ಆಗಲಿ.
ಕೆ.ಬಿ. ಸುರೇಶ್, ಅಧ್ಯಕ್ಷ, ರೈತ ಹೋರಾಟ ಸಮಿತಿ
ಪರಿಸರಕ್ಕೆ ವಿರುದ್ಧವಾಗಿ ನಾವು ಹೋಗುವುದಿಲ್ಲ. ಮಳೆ ಕಡಿಮೆ ಆದರೂ ಮಳೆ ಜಾಸ್ತಿ ಬಂದರೂ ಕೊಡಗಿನ ಮೇಲೆ ಆರೋಪ ಹೊರಿಸಲಾಗುತ್ತದೆ. ಪರಿಸರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಆಗಬೇಕು. ಕಸ್ತೂರಿ ರಂಗನ್ ವರದಿ ಪೂರ್ಣವಾಗಿ ಜಾರಿಯಾದರೆ ಕೊಡಗಿನವರು ವಾಸ ಮಾಡಲು ಕೂಡ ಆಗುವುದಿಲ್ಲ. ಕಾಡು ಕಡಿಮೆ ಆಗಿಲ್ಲ. ಜಾಸ್ತಿ ಆಗಿದೆ. ಪ್ರಾಣಿಗಳಿಗೆ ಕಾಡಿನಲ್ಲಿ ಆಹಾರ ಸಿಗುತ್ತಿಲ್ಲ. ಹಾಗಾಗಿ ನಾಡಿಗೆ ಬರುತ್ತಿದೆ. ಪರಿಸರ ಪರಿಸರವಾಗಿಯೇ ಇರಲಿ. ನಾವೂ ಒಂದು ಜೀವಿಯಾಗಿ ಬದುಕೋಣ
ಮಿಥುನ್, ರೈತ ಹೋರಾಟ ಸಮಿತಿ ಪ್ರಮುಖರು