ಜಿಲ್ಲೆ

ಅಮೂಲ್ಯಾಗೆ ಮಾತಾಡೋದಕ್ಕೆ ಅವಕಾಶ ಮಾಡಿಕೊಡಬೇಕಿತ್ತು: ನಾನು ಅವಳ ಭಾಷಣ ಕೇಳಿದ್ದೆ ಎಂದ ಡಿಕೆಶಿ

ಬೆಂಗಳೂರು: ನಿನ್ನೆ ಫ್ರೀಡಂ ಪಾರ್ಕ್​ನಲ್ಲಿ ನಡೆದ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ ಅಮೂಲ್ಯಾ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಇಂದು ಅದರ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆಕೆಗೆ ಮಾತನ್ನು ಮುಂದುವರೆಸುವುದಕ್ಕೆ ಅವಕಾಶ ಮಾಡಿಕೊಡಬೇಕಿತ್ತು ಎಂದು ಕಾಂಗ್ರೆಸ್​ನ ನಾಯಕ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

ಘಟನೆಯ ಕುರಿತಾಗಿ ಮಾತನಾಡಿರುವ ಶಿವಕುಮಾರ್​, "ಅಮೂಲ್ಯಾ ಇನ್ನೂ ಏನು ಹೇಳ್ತಿದ್ರು ಎನ್ನೋದನ್ನ ಕೇಳೋದಕ್ಕೆ ಅವಕಾಶ ಕೊಡಬೇಕಿತ್ತು. ನಾನು ಆಕೆಯ ಭಾಷಣಗಳನ್ನು ಕೇಳಿದ್ದೇನೆ. ಆಕೆ ಇದುವರೆಗೂ ಅಂತಹ ಮಾತನ್ನು ಹೇಳಿದ್ದನ್ನು ನಾನು ಕೇಳಿಲ್ಲ. ಇದರ ಬಗ್ಗೆ ನನಗೆ ಸ್ಪಷ್ಟನೆ ಬೇಕು." ಎಂದು ಹೇಳಿದ್ದಾರೆ.

ಘಟನೆಯಲ್ಲಿ ಆಕೆ ಏನು ಹೇಳು ಬಯಸುತ್ತಿದ್ದಳು ಎನ್ನುವುದರ ಕುರತಾಗಿ ನನಗೆ ಸ್ಪಷ್ಟನೆ ಇಲ್ಲದ ಕಾರಣ ನಾನು ಇದರ ಕುರಿತಾಗಿ ಹೆಚ್ಚಿನ ಹೇಳಿಕೆ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)