ಶ್ರವಣಬೆಳಗೊಳ ಹೋಬಳಿ ಕಾಂತರಾಜಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಅಮೃತಶಿಲ್ಪಾ ಅವಿರೋಧವಾಗಿ ಆಯ್ಕೆಯಾದರು. 
ಜಿಲ್ಲೆ

ಕಾಂತರಾಜುಪುರ ಗ್ರಾಪಂ ಅಧ್ಯಕ್ಷರಾಗಿ ಅಮೃತಶಿಲಾ ಆಯ್ಕೆ

ಶ್ರವಣಬೆಳಗೊಳ: ಹೋಬಳಿಯ ಕಾಂತರಾಜುಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಅಮೃತಶಿಲ್ಪಾ ಶಿವರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

18 ಸದಸ್ಯರ ಸಂಖ್ಯಾಬಲ ಹೊಂದಿರುವ ಈ ಗ್ರಾಮ ಪಂಚಾಯಿತಿಯಲ್ಲಿ ರತ್ನಮ್ಮ ದೇವರಾಜ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಮೃತಶಿಲ್ಪಾ ಶಿವರಾಜ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾಧಿಕಾರಿಯಾಗಿದ್ದ ಹರೀಶ್ ಅವಿರೋಧ ಆಯ್ಕೆ ಪ್ರಕಟಿಸಿದರು.

ನೂತನ ಅಧ್ಯಕ್ಷೆ ಅಮೃತಶಿಲ್ಪಾ ಮಾತನಾಡಿ, ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಸ್ಥಾನಕ್ಕೆ ನನ್ನ ಅವಿರೋಧ ಆಯ್ಕೆಗೆ ಸಹಕರಿಸಿದ ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರಿಂದ ರಾಜಕೀಯವಾಗಿ ಸಾಮಾಜಿಕ ನ್ಯಾಯ ಒದಗಿಸಿದಂತಾಗಿದೆ. ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ. ಪಕ್ಷಾತೀತ ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಂತ, ಹಂತವಾಗಿ ಕೈಗೊಳ್ಳುತ್ತೇವೆ. ಸದಸ್ಯರು ಸಹಕಾರ ಮನೋಭಾವದಿಂದ ಕೆಲಸ ಮಾಡಿದರೆ ಸಾಕಷ್ಟು ಅಭಿವೃದ್ಧಿ ಸಾಧಿಸಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ರೂಪಿಸಬಹುದು ಎಂದು ಹೇಳಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಪರಮ ದೇವರಾಜೇಗೌಡ, ಮಾಜಿ ಅಧ್ಯಕ್ಷರಾದ ಬರಾಳು ಮಹೇಂದ್ರ, ಕಾರ್ತಿಕ್, ಉಪಾಧ್ಯಕ್ಷೆ ಮಮತಾರಾಣಿ, ಮುಖಂಡರಾದ ವಡ್ಡರಹಳ್ಳಿ ರಾಜಣ್ಣ, ಶ್ರೀರಂಗ, ಸೂರಣ್ಣ, ಎಂ.ಎನ್.ಮಹೇಶ್, ಚಿಕ್ಕಬಿಳ್ತಿ ಗಂಗಾಧರ್, ಜಗದೀಶ್, ಎಂ.ಡಿ.ನಾರಾಯಣ್, ರವೀಶ್, ನಾಗೇಶ್, ಪ್ರಕಾಶ್, ಗುರು, ಕೃಪಾಕರ್, ಕೆ.ಟಿ.ಮಂಜುನಾಥ್, ನಟೇಶ್, ಸೋಮಣ್ಣ, ರವಿ, ದಮ್ಮನಿಂಗಳ ಶಂಕರ್, ಹಿರಿಬಿಳ್ತಿ ಮಂಜು, ಪಿಡಿಒ ಸುಮನ್ ಇದ್ದರು.