ದಾವಣಗೆರೆ: ಇಲ್ಲಿನ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಭಾನುವಾರ ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆ ಆಚರಿಸಲಾಯಿತು.
ಬ್ರಹ್ಮಚಾರಿಣಿ ಚೈತನ್ಯ ಅಮ್ಮ, ಆಡಳಿತಾಧಿಕಾರಿ ಕೊಟ್ರೇಶಪ್ಪ ಹಾಗೂ ಪ್ರಾಂಶುಪಾಲ ಎನ್.ಸಿ.ವಿವೇಕ್ ಕಾರ್ಯಕ್ರಮ ಉದ್ಘಾಟಿಸಿದರು. ಗುರುಪೂರ್ಣಿಮೆಯ ಪೂಜಾ ವಿಧಿಗಳನ್ನು ನಡೆಸಲಾಯಿತು.
ವಿದ್ಯಾರ್ಥಿಗಳು ಗುರುವಿನ ಮಹತ್ವವನ್ನು ಸಾರುವ ನಾಟಕ, ಹಾಡು, ಭಾಷಣ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಪಾಲಕರ ಪಾದ ಪೂಜೆ ಮಾಡುವ ಮೂಲಕ ಸಂಸ್ಕೃತಿ ಪೂಜೆ ನೆರವೇರಿಸಿದರು. ಶಾಲೆಯ ಶಿಕ್ಷಕರು ಶಿಕ್ಷಕೇತರರು ಪಾಲ್ಗೊಂಡಿದ್ದರು. ಭಜನೆ ಮಹಾಮಂಗಳಾರತಿ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.