ಸೋಮವಾರಪೇಟೆ: ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷೆ ಸುಮಾ ಸುದೀಪ್ ಅಧ್ಯಕ್ಷತೆಯಲ್ಲಿ ಗುರುವಾರ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಸಂಘಕ್ಕೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅಕ್ಟೋಬರ್‌ನಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸದಸ್ಯರು ಹೆಚ್ಚಿನ ಸಹಕಾರ ನೀಡುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು. ಹೆಚ್ಚಿನ ಸದಸ್ಯರು ಪೂರ್ಣ ಪ್ರಮಾಣದ ಷೇರು ಹಣವನ್ನು ಪಾವತಿ ಮಾಡಲು ಮುಂದಾಗಿಲ್ಲ. ಕೂಡಲೇ ಎಲ್ಲರೂ ಪೂರ್ಣ ಪ್ರಮಾಣದ ಷೇರು ಹಣವನ್ನು ಸಂಘದಲ್ಲಿ ಪಾವತಿಸುವಂತೆ ಅಧ್ಯಕ್ಷೆ ಸುಮಾ ಸುದೀಪ್ ಮನವಿ ಮಾಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಜಲಜಾ ಶೇಖರ್, ಕಾರ್ಯದರ್ಶಿ ಲೀಲಾ ನಿರ್ವಾಣಿ, ನಿರ್ದೇಶಕರಾದ ಗಾಯತ್ರಿ ನಾಗರಾಜು, ಗೀತಾ ರಾಜು, ಜ್ಯೋತಿ ಶುಭಾಕರ್, ಶೋಭಾ ಯಶವಂತ್, ಚಂದ್ರಕಲಾ ಗಿರೀಶ್, ವರಲಕ್ಷ್ಮೀ ಸಿದ್ಧೇಶ್ವರ್, ಶೈಲಾ ವಸಂತ್ ಇದ್ದರು.