ಜಿಲ್ಲೆ

ಮಕ್ಕಳು ಅಭ್ಯಾಸದೊಂದಿಗೆ ಶರಣರ ವಚನಗಳನ್ನು ಓದಲಿ : ಜಯಶ್ರೀ

Gadag - Shivanand Hiremath

ಗದಗ: ಶರಣರು ತಮ್ಮ ವಚನ ರಚನೆಯಲ್ಲಿ ಮೌಲ್ಯಗಳನ್ನೇ ಹೂರಣವಾಗಿ ತುಂಬಿ ಅಂಕಿತನಾಮಗಳಿAದ ಗುರುತಿಸಿಕೊಂಡಿದ್ದಾರೆ. ಮಕ್ಕಳು ತಮ್ಮ ನಿತ್ಯದ ಅಭ್ಯಾಸದೊಂದಿಗೆ ಶರಣರ ವಚನಗಳನ್ನು ಓದಿ ಸನ್ಮಾರ್ಗದಲ್ಲಿ ಮುನ್ನಡೆಯಬೇಕೆಂದು ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ತಾತನಗೌಡ ಪಾಟೀಲ ಅಭಿಪ್ರಾಯಪಟ್ಟರು.
ಅವರು ಗುರುವಾರ ಗದಗ ಜಿಲ್ಲಾ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆಯು ಬೆಟಗೇರಿಯ ಸರ್ಕಾರಿ ಶಾಲೆ ನಂ. ೭ ಹಾಗೂ ಕೆ.ಬಿ.ಎಸ್ ಶಾಲೆ ನಂ. ೩ ಮತ್ತು ಎಲ್.ಪಿ.ಎಸ್ ಶಾಲೆ ನಂ. ೨ ರಲ್ಲಿ ಎರ್ಪಡಿಸಿದ್ದ ಅಮೃತಭೋಜನ- ಜ್ಞಾನ ಸಿಂಚನ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಮಾತನಾಡಿದರು.
ಚೇಡರ ದಾಸಿಮಯ್ಯ, ರಾಮನಾಥ, ಅಲ್ಲಮಪ್ರಭು, ಗುಹೇಶ್ವರ, ಅಕ್ಕಮಹಾದೇವಿ, ಚನ್ನಮಲ್ಲಿಕಾರ್ಜುನ, ಬಸವಣ್ಣ ಹೀಗೆ ಹಲವಾರು ಶರಣ ಶರಣೆಯರ ವಚನಗಳನ್ನು ಓದಿ ಪಚನ ಮಾಡಿಕೊಳ್ಳಬೇಕು ವಚನಕಾರರ ಅಂಕಿತನಾಮಗಳನ್ನೂ ಅರಿಯಬೇಕೆಂದರು.
ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ರೇಣುಕಾ ಅಮಾತ್ಯ ಅವರು ಮಕ್ಕಳು ಅಭ್ಯಾಸವನ್ನು ಕಷ್ಟಪಟ್ಟು ಇಷ್ಟದೊಂದಿಗೆ ಓದಿ ಮನನ ಮಾಡಿಕೊಂಡು ಪ್ರತಿಭಾನ್ವಿತರಾಗಿ ಹೊರಹೊಮ್ಮಬೇಕೆಂದರು.
ಶಾಲಾ ಮುಖ್ಯೋಪಾಧ್ಯಾಯನಿ ಎಸ್.ಎಚ್.ದಂಡಗಿದಾಸರ ಮಾತನಾಡಿ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ಆಗಮಿಸಿ ಮಕ್ಕಳಿಗೆ ಪ್ರೋತ್ಸಾಹದಾಹಕವಾಗಿ ಕಲಿಕಾ ಸಾಮಗ್ರಿಗಳನ್ನು ನೀಡಿ, ಸಿಹಿ ಭೋಜನ ಉಣಬಡಿಸಿದರಲ್ಲದೆ ನೀತಿಯುಕ್ತ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ದೇಣಿಗೆ ನೀಡಿರುವದು ಅಭಿನಂದನೀಯ ಎಂದರು.
ವೇದಿಕೆಯ ಮೇಲೆ ಪ್ರತಿಭಾ ನವಲಗುಂದ, ಶೋಭಾ ಕಲ್ಲನಗೌಡ್ರ ಉಪಸ್ಥಿತರಿದ್ದರು. ಪಿ.ಬಿ.ಹಿರೇಮಠ ಹಾಗೂ ಪಿ.ಆರ್.ಕರಮುಡಿ ಪ್ರಾರ್ಥಿಸಿದರು ಜಿ.ಬಿ.ಬಾಣದ ಸ್ವಾಗತಿಸಿದರು ಎಂ.ಎಸ್.ಹಳ್ಳಿ ಪರಿಚಯಿಸಿದರು, ಎಲ್.ಎಸ್.ಪೂಜಾರ ನಿರೂಪಿಸಿದರು ಕೊನೆಗೆ ಕೆ.ಎಸ್.ಬೇಲೇರಿ ವಂದಿಸಿದರು.
ಕಾರ್ಯಕ್ರಮದಲ್ಲಿ ತಾಹೇರಾ ಕಂಪ್ಲಿ, ರೇಣುಕಾ ಉಮನಾಬಾದಿ, ಲತಾ ರೋಣದ, ಮಂಜುಳಾ ಮಡಿವಾಳರ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.