ಗೋಕಾಕ: ಕ್ರೀಡಾಪಟುಗಳು ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಬೇಕು ಎಂದು ತಹಸೀಲ್ದಾರ್ ಡಾ.ಮೋಹನ ಭಸ್ಮೆ ಹೇಳಿದರು.
ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗೋಕಾಕ ತಾಲೂಕುಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡಾಳುಗಳು ತೀರ್ಪುಗಾರರ ನಿರ್ಣಯ ಗೌರವಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಿ ಮೈಸೂರಿನಲ್ಲಿ ಜರುಗುವ ದಸರಾ ಕ್ರೀಡಾಕೂಟದಲ್ಲಿ ಸಾಮರ್ಥ್ಯ ಪ್ರದರ್ಶಿಸಬೇಕು ಎಂದರು.
ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಉಪಾಧ್ಯಕ್ಷೆ ಬೀಬಿಬತೂಲ್ ಜಮಾದಾರ್, ಕೆ.ಎಲ್.ತೋರಣಗಟ್ಟಿ, ವಿಠ್ಠಲ ಮುರ್ಕಿಬಾವಿ, ರಜನಿಕಾಂತ ಮಾಳೋದೆ, ಬಸವರಾಜ ಜಕ್ಕಣ್ಣವರ, ರೋಹಿಣಿ ಎಚ್., ಕೆ.ಎಸ್.ದಟ್ಟಿ, ಅಜಯ ಕಲಘಟಗಿ ಇತರರು ಇದ್ದರು.1