ವಿಜಯಪುರ ತಾಲೂಕಿನ ಅರಕೇರಿ ಮುಮ್ಮೆಟ್ಟಿಗುಡ್ಡದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ವೇದ ಅಕಾಡೆಮಿ ಶಾಲೆಯ ಅಧ್ಯಕ್ಷ ಶಿವಾನಂದ ಕೆಲೂರ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ದೇವಸ್ಥಾನದ ಧರ್ಮದರ್ಶಿ ಅಪ್ಪು ಒಡೆಯರ್, ಕಮಿಟಿಯ ಸದಸ್ಯರಾದ ಪರಮೇಶ್ವರ ಒಡೆಯರ್, ನಿಂಗಪ್ಪ ಒಡೆಯರ್ ಇತರರಿದ್ದರು.  
ಜಿಲ್ಲೆ

ವಿಜಯಪುರ : ಅಮೋಘಸಿದ್ಧರ ಲೀಲೆ ಅಪಾರವಾದದು

Bellari - Heera Nayak

ವಿಜಯಪುರ : ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಭವಿಗಳನ್ನು ಅನುಭವಿಗಳನ್ನಾಗಿ ಮಾಡಿ ಕೋಟ್ಯಂತರ ಜನ ಭಕ್ತರ ಬಾಳಿಗೆ ಬೆಳಕಾದ ಮುಮ್ಮೆಟ್ಟಿ ಗುಡ್ಡದ ಒಡೆಯ, ಸಿದ್ಧರ ಸಿದ್ಧ, ಭಂಡಾರದ ಒಡೆಯ, ಶ್ರೀಗುರು ಅಮೋಘಸಿದ್ಧರ ಲೀಲೆ ಅಪಾರವಾದದು ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ವೇದ ಅಕಾಡೆಮಿ ಶಾಲೆಯ ಅಧ್ಯಕ್ಷ ಶಿವಾನಂದ ಕೆಲೂರ ಹೇಳಿದರು.

ತಾಲೂಕಿನ ಅರಕೇರಿ ಮುಮ್ಮೆಟ್ಟಿಗುಡ್ಡದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಗುಡ್ಡದಲ್ಲಿರುವ ಅಮೋಘಸಿದ್ಧನು ಭಕ್ತಿಯಿಂದ ಬಂದ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ. ಬಂದ ಭಕ್ತರು ತಮ್ಮ ಕಷ್ಟ-ಸುಖಗಳನ್ನು ಮನಸ್ಸಿನಲ್ಲಿ ದೇವರಿಗೆ ಅರ್ಪಿಸಿ ಅದರಿಂದ ಮುಕ್ತಿ ಪಡೆದುಕೊಳ್ಳಲು ಶ್ರಮಿಸಿದಾಗ ದೇವನು ಭಕ್ತರನ್ನು ಕಾಪಾಡುವ ದೈವಿ ಪುರುಷನ ಪವಾಡ ದೊಡ್ಡದು ಎಂದು ಹೇಳಿದರು.

ದೇವಸ್ಥಾನದ ಧರ್ಮದರ್ಶಿ ಅಪ್ಪು ಒಡೆಯರ್ ಮಾತನಾಡಿ, ಶಿವಾನಂದ ಕೆಲೂರ ಗುರುಗಳ ಸಾಧನೆಯು ಅಪಾರವಾದದು, ಬದುಕಿನಲ್ಲಿ ಬರುವಂತಹ ಹಲವಾರು ಸಮಸ್ಯೆಗಳನ್ನು ಸವಾಲುಗಳನ್ನು ಎದುರಿಸಿ ಲಕ್ಷಾಂತರ ಮಕ್ಕಳ ಬಾಳಿನ ಬೆಳಕಾಗಿ, ಸಾವಿರಾರು ಕುಟುಂಬಗಳಿಗೆ ಆಸರೆಯಾಗಿ ಶಿಕ್ಷಣ ಕ್ಷೇತ್ರದ ಧ್ರುವತಾರೆಯಾಗಿ, ಶಿಕ್ಷಣ ತಜ್ಞರಾಗಿ, ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಸಾಧನೆಯನ್ನು ಮಾಡಿ ವಿಜಯಪುರ ನಗರವನ್ನು ರಾಜ್ಯವಲ್ಲದೇ, ನೆರೆ ರಾಜ್ಯಗಳಿಗೂ ವಿಸ್ತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಕಮಿಟಿಯ ಸದಸ್ಯರಾದ ಪರಮೇಶ್ವರ ಒಡೆಯರ್, ನಿಂಗಪ್ಪ ಒಡೆಯರ್, ಭೂತಾಳಸಿದ್ಧ ಒಡೆಯರ್, ನಾಡಗೌಡ ಒಡೆಯರ್, ಬಾಬು ಪೂಜಾರಿ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.