ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಾಥಮಿಕ, ಪ್ರೌಢಶಾಲೆಗಳ ತರಗತಿಗಳಲ್ಲಿ ಪಠ್ಯಕ್ರಮ ಚೌಕಟ್ಟಿನ ಅಡಿಯಲ್ಲಿ ಶಿಕ್ಷಕರು ಅರಿತು ಕಲಿಸಲು ರೂಢಿಸಿಕೊಳ್ಳಬೇಕು ಎಂದು ಡಯಟ್ ಹಿರಿಯ ಉಪನ್ಯಾಸಕ ಅರ್ಜುನ ಕಂಬೋಗಿ ಸಲಹೆ ನೀಡಿದರು.
ತಾಲೂಕಿನ ಮರೇವಾಡ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಮ್ಮಿನಬಾವಿ ಕ್ಲಸ್ಟರ್ ಮಟ್ಟದ ಪಠ್ಯಾಧಾರರಿತ ಶಿಕ್ಷಕರ ಚಿಂತನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರೂ ನಿತ್ಯ ತಮ್ಮ ಬೋಧನಾ ವಿಷಯಗಳನ್ನು ಅಧ್ಯಯನ ಮಾಡಬೇಕು. ತರಗತಿಗಳಿಗೆ ಅಗತ್ಯ ಸಿದ್ಧತೆಗಳಿಲ್ಲದೆ ತರಗತಿ ಪ್ರವೇಶಿಸಬಾರದು. ಕಾಲಕಾಲಕ್ಕೆ ಬದಲಾದ ಶಿಕ್ಷಣ ನೀತಿ ಮತ್ತು ಪಠ್ಯಕ್ರಮ ಚೌಕಟ್ಟು ಒಳಗೊಳ್ಳಬೇಕಾದ ನಿರ್ದಿಷ್ಟ ಅಂಶಗಳನ್ನು ರಾಷ್ಟಿçÃಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು ನಿರ್ದೇಶಿಸುತ್ತಿದೆ. ಅವುಗಳನ್ನು ಅಧ್ಯಯನಕ್ಕೆ ಸ್ವೀಕರಿಸುವುದರ ಜೊತೆಗೆ ಪಠ್ಯಪೂರಕ ಸಾಹಿತ್ಯದ ಅಧ್ಯಯನ ಮಾಡಬೇಕು ಎಂದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಬಸವರಾಜ ಕುರಗುಂz ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಶಿಕ್ಷಕ ಶಿವಾನಂದ ಹೂಗಾರ ಸ್ವಾಗತಿಸಿದರು. ಮರೇವಾಡ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ಆತ್ಮಾನಂದ ಕೆಂಪೂರ ನಿರೂಪಿಸಿದರು. ತಿಮÁ್ಮಪೂರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ಎಸ್.ಎ. ಜಾಧವ ವಂದಿಸಿದರು. ಕ್ಲಸ್ಟರ್‌ನ ವಿವಿಧ ಶಾಲೆಗಳ ಶಿಕ್ಷಕ- ಶಿಕ್ಷಕಿಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.