ಜಿಲ್ಲೆ

ಅಮಿತ್ ಷಾ ರಾಜೀನಾಮೆಗೆ ಒತ್ತಾಯ

ಐನಾಪುರ: ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆಗೆ ಆಗ್ರಹಿಸಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟಗಳ ವತಿಯಿಂದ ಪಟ್ಟಣದ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ, ಕಂದಾಯ ನಿರೀಕ್ಷಕ ಶಫಿ ಮುಲ್ಲಾ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಮಾನವ ಸರಪಳಿ ರಚಿಸುವ ಮೂಲಕ ರಸ್ತೆ ಸಂಚಾರ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ದಲಿತ ಮುಖಂಡ ಸಂಜಯ ತಳವಲ್ಕರ್ ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನದಿಂದ ಅಮಿತ್ ಷಾ ಜನಪ್ರತಿನಿಧಿಯಾಗಿದ್ದಾರೆ. ಷಾ ಅವರು ನೈತಿಕ ಹೊಣೆ ಹೊತ್ತು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ವಕೀಲ ಉಮೇಶ ಮನೋಜ ಮಾತನಾಡಿದರು. ಶಶಿಕಾಂತ ನಡೋಣಿ, ಉಮೇಶ ಮನೋಜೆ, ಶ್ರೀನಿವಾಸ ಕಲಾದಗಿ, ಆನಂದ ನಾಯಕ, ಮಹೇಶ ಕಾಂಬಳೆ, ಹನುಮಂತ ಮದಾಳೆ, ಶಂಕರ ನಡೋಣಿ, ಉಮಾಜಿ ನಡೋಣಿ, ರಮೇಶ ಮಾದರ, ರಾಜು ಹರಳೆ, ಭಾಸ್ಕರ ಮಾದರ ಇತರರಿದ್ದರು.