ಅಮಿತ್ ಷಾ ರಾಜೀನಾಮೆಗೆ ಒತ್ತಾಯಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಅಧ್ಯಕ್ಷ ದೊಡ್ಡಹೆಜ್ಜೂರು ನಾಗೇಶ್ ಹುಣಸೂರು ತಾಲೂಕು ತಹಸೀಲ್ದಾರ್ ಜೆ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು. ಸೇನೆಯ ಹನುಮಂತ, ಬೋಗಯ್ಯ, ರವಿ ಇತರರು ಇದ್ದರು. 
ಜಿಲ್ಲೆ

ಅಮಿತ್ ಷಾ ರಾಜೀನಾಮೆ ನೀಡಲಿ

ರವಿಕುಮಾರ್ ಪಿ. ಕೆ

ಹುಣಸೂರು: ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಅಮಿತ್ ಷಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸದಸ್ಯರು ಮನವಿ ಸಲ್ಲಿಸಿದರು.

ತಹಸೀಲ್ದಾರ್ ಜೆ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದ ಸೇನೆಯ ತಾಲೂಕು ಅಧ್ಯಕ್ಷ ದೊಡ್ಡಹೆಜ್ಜೂರು ನಾಗೇಶ್ ಈ ವೇಳೆ ಮಾತನಾಡಿ, ಅಂಬೇಡ್ಕರ್ ವಿರುದ್ಧ ಕೇವಲವಾಗಿ ಮಾತನಾಡಿರುವ ಅಮಿತ್ ಷಾ ಗೃಹಸಚಿವ ಹುದ್ದೆಗೆ ಏರಲು ಅಂಬೇಡ್ಕರ್ ನೀಡಿರುವ ಸಂವಿಧಾನವೇ ಕಾರಣ ಎನ್ನುವುದನ್ನು ಅರಿಯಲಿ. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಕುರಿತು ಮಾತನಾಡುವ ವೇಳೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ಸೇನೆಯ ಸಹಕಾರ್ಯದರ್ಶಿ ಹನುಮಂತ. ಹೋಬಳಿ ಅದ್ಯಕ್ಷ ಬೊಗಯ್ಯ, ಹೋಬಳಿ ಉಪಾಧ್ಯಕ್ಷ ಗಣೇಶ್ ಸದಸ್ಯ ರವಿ ಇದ್ದರು.